Jaimini Bharata (Kannada) 4.38
Jaimini Bhārata (Kannada) 4.38
- Language
- Kannada
4.38
ಕಂಡು ಬೆರಗಾದುದೆಲ್ಲಾ ಜನಂ ಸ್ತುತಿಸಿದರ್| ಪುಂಡರೀಕಾಕ್ಷನಂ ಬಳಿಕ ಲಿಖಿತಂ ಖಾತಿ |
ಗೊಂಡಿವಂ ಬಲ್ಲನಗ್ನಿಸ್ತಂಭಮಂ ನಾರಿಕೇಳಂಗಳಂ ತರಿಸೆನೆ ||
ಕೊಂಡು ಬಂದೆಳನೀರ್ಗಳಂ ಸುರಿಯಲುರಿ ನಭೋ |
ಮಂಡಲವನಪ್ಪಳಿಸೆ ಹೊಡೆದುವು ಪುರೋಹಿತರ |
ಗಂಡಸ್ಥಳಂಗಳಂ ಸಿಡಿವೋಳ್ಗಳಾಗಳುಂ ನಗುತಿರ್ದನಾಕುವರನು ||38||