Pramāṇa · Search · About · API

Jaimini Bharata (Kannada) 4.41

Jaimini Bhārata (Kannada) 4.41

Language
Kannada

4.41

ಪನ್ನೀರಮಿಂದು ದಿವ್ಯಾಂಬರವನುಟ್ಟು ಬಾ |
ವನ್ನದಿಗುರಂ ಗೈಯ್ದು ಕಮಲರ್ಗಳಂ ಸೂಡಿ |
ಸನ್ನುತ ಸುಯಕ್ಷಕರ್ದಮವನನುಕರಿಸಿ ಕತ್ತುರಿತಿಲಕವಿಟ್ಟು ಪಣೆಗೆ ||
ರನ್ನದೊಡವುಗಳನಳವಡಿಸಿ ವೀಳೆಯಗೊಂಡು |
ತನ್ನನುಳುಹಿದ ದೇವಪುರದ ಲಕ್ಷ್ಮೀಪತಿಯ |
ನಿನ್ನು ಕಂಡಪೆನೆಂಬ ಹರ್ಷದಿಂ ಕಳೆಯೇರಿ ಮೆರೆದಂ ಸುಧನ್ವನಂದು||41||