Karnata Bharata Kathamanjari 1.27.46
Karṇāṭa Bhārata Kathāmañjarī 1.27.46
- Language
- Kannada
1.27.46
ತೊಡಚಿದೆನು ಬೊಮ್ಮಾಸ್ತ್ರವನು
ಹುರಿಯೊಡೆದುದಸುರರು ಮಲೆತವರನಿ
ಕ್ಕಡಿಯ ಮಾಡಿತು ಬ೦ದುದಳಿವು ನಿವಾತ ಕವಚರಿಗೆ |
ಕಡುಹಿನಿ೦ದಾಗ್ನೇಯ ವಾರುಣ
ದಡಬಳಿಗರನು ಬಾಚಿದವು ಬರ
ಸಿಡಿಲ ಸೆರೆ ಬಿಟ್ಟ೦ತೆ ಕಳಚಿದವಸುರ ಬಲದಸುವ || ೪೬ ||