Pramāṇa · Search · About · API

Karnata Bharata Kathamanjari 1.29.1_7

Karṇāṭa Bhārata Kathāmañjarī 1.29.1_7

Language
Kannada

1.29.1_7

ಪರ್ಯಾಯ ಅರ್ಥ::ಜನಮೇಜಯ ರಾಜನೇ ಮನವಿಟ್ಟು ಕೇಳು, ಧರ್ಮಜನು, ನಮ್ಮ ಪೂರ್ವಜ ನಹುಷನಿಗೆ ನಿನ್ನಿಂದ ಶಾಪವಿಮೋಚನೆಯಾಗಿ ಉಪಕಾರವಾಯಿತು ಎಂದು ಅವನ ಮುಖದಲ್ಲಿ ತುಂಬಿದ ಚಿಂತೆಯನ್ನು ಬಿಡಿಸಿ, ಭೀಮನನನ್ನು ಆಶ್ರಮಕ್ಕೆ ಕರೆ ತ೦ದನು. ಭೀಮನ ಮನಸ್ಸಿನ 'ಅಜಗರಕ್ಕೆ ಸೋತೆನಲ್ಲಾ' ಎಂಬ ಅವಮಾನದ ನೋವನ್ನು ದ್ರೌಪದಿಯೂ, ದೌಮ್ಯರೂ, ಎಲ್ಲಾ, ಶ್ರೇಷ್ಠ ಜನರೂ ಅಮೃತದಂತಿರುವ ಮಧುರವಾದ ರಸವತ್ತಾದ ನುಡಿಗಳಿಂದ ಭೀಮನ ಮನಸ್ಸನ್ನು ಮೃದುವಾಗಿ ಸವರಿ ಅವನನ್ನು ಶಾಂತಗೊಳಿಸಿದರು.