Karnata Bharata Kathamanjari 1.36.12_17
Karṇāṭa Bhārata Kathāmañjarī 1.36.12_17
- Language
- Kannada
1.36.12_17
ಒಳಗೆ ನೀ ಕಾದುವೊಡೆ ದುರ್ಗವ ಬಲಿಸು=ಗೋಪಾಲಕ ಹೇಳಿದನು, ಕೋಟೆಯ ಒಳಗಿದ್ದು ಯುದ್ಧವನ್ನು ಮಾಡುವುದಾದರೆ ದುರ್ಗಕ್ಕೆ ಕಾವಲನ್ನು ಬಲಪಡಿಸು. ಬವರಕೆ ಹಿಂದುಗಳೆಯದೆ ನಿಲುವ ಮನ ನಿನಗೆ+ ಈಗಲುಂಟೇ= ಯುದ್ಧಕ್ಕೆ ಹಿಂದೆಗೆಯದೇ ಶತ್ರುವನ್ನು ಎದುರಿಸಲು ಈಗ ನಿನಗೆ ಮನಸ್ಸಿದೆಯೇ? ನಡೆಯಬೇಕು+ ಎನಲು= ಕೂಡಲೆ ನೀವು ಯುದ್ಧಕ್ಕೆ ಹೊರಡಬೇಕು,ಎನ್ನಲು,// ಕೆಲಬಲನ ನೋಡಿದನು ಮೀಸೆಯನು+ ಅಲುಗಿದನು= ಅತ್ತಿತ್ತ ಇದ್ದವರನ್ನು ನೋಡಿದನು; ತನ್ನ ಮೀಸೆಯನ್ನು ಕುಣಿಸಿದನು. ತನ್ನ+ ಇದಿರ ಮೇಳದ ಲಲನೆಯರ ಮೊಗ ನೋಡತು+ ಉತ್ತರ ಬಿರುದ ಕೆದರಿದನು= ಎದುರಿನಲ್ಲಿ ಇದ್ದ ಮೇಳದ- ಗುಂಪಿನ ಲಲನೆಯರ/ ಹೆಂಗಳೆಯರ ಮೊಗ ನೋಡತು+ ಉತ್ತರ ಬಿರುದ ಕೆದರಿದನು= ಮುಖವನ್ನು ನೋಡುತ್ತಾ ತನ್ನ ಶೌರ್ಯವನ್ನು ಕೊಚ್ಚಿಕೊಂಡನು/ ಹೊಗಳಿಕೊಂಡನು.