Pramāṇa · Search · About · API

Karnata Bharata Kathamanjari 1.36.14_19

Karṇāṭa Bhārata Kathāmañjarī 1.36.14_19

Language
Kannada

1.36.14_19

ಎನಿತು ಬಲ ಘನವಾದೊಡೆ+ ಏನು+ ಅದು ನಿನಗೆ ಗಹನವೆ ಜೀಯ,= ದೊರೆಯೇ, ಎನಿತು ಬಲ-ಸೈನ್ಯವು ಘನವಾದೊಡೆ+ ಏನು+- ಎಷ್ಟು ದೊಡ್ಡದಾದರೇನು, ಅದು ನಿನಗೆ ಗಹನವೆ- ಕಷ್ಟವೇ? // ಜಗದಲಿ ದಿನಪನ+ ಇದಿರಲಿ ದಿಟ್ಟತನವೇ ತಮದ ಗಾವಳಿಗೆ= ಜಗತ್ತಿನಲ್ಲಿ ಸುರ್ಯನ ಎದುರಿನಲ್ಲಿ ತಮದ ಗಾವಳಿಗೆ- ಕತ್ತಲೆಯ ತಂಟೆಯು ದಿಟ್ಟತನ- ದೈರ್ಯವನ್ನುತೋರಬಲ್ಲದೇ? ಬಿನುಗು- ಅಲ್ಪರಾದ, ಕೌರವ ರಾಯರ ಬಿಂಕ- ಸೊಕ್ಕು ಶೌರ್ಯ, ಗೋವರ ಮೊನೆಗೆ ಮೆರೆದೊಡೆ- ಗೋಪಾಳಕರ ಎದುರು ತೋರಿಕೊಂಡರೆ ಲೆಕ್ಕವೇ. ಸಾಕು ನಿಂದಿರು- ಮಾತು ಸಾಕು, ನೀನು ಅವರ ಎದುರು ನಿಲ್ಲು; ಜನಪ,- ರಾಜನೇ, ತೋರಿಸು ಕೈಗುಣವ ಕೌರವನ ಥಟ್ಟಿನಲಿ= ನಿನ್ನ ಶೌರ್ಯವನ್ನು ಕೌರವರ ಸೈನ್ಯದಲ್ಲಿ ತೋರಿಸು, ಎಂದನು ಗೋವಳ.