Pramāṇa · Search · About · API

Karnata Bharata Kathamanjari 1.36.15_20

Karṇāṭa Bhārata Kathāmañjarī 1.36.15_20

Language
Kannada

1.36.15_20

ಎಂದಡೆ+ ಅಬ್ಬರಿಸಿದನು ತಾ ಕಲಿಯೆಂದು ಬಗೆದನು= ಗೋವಳನು ಇವನನ್ನು ಹೊಗಳಲು, ತಾನು ವೀರನೆಂದು ಭಾವಿಸಿದನು.// ಮೀಸೆಯನು ಬೆರಳಿಂದ ತಿರುಹುತ ಮುಗುಳುನಗೆ ಹರುಷದಲಿ ಮೈಮರೆದ ಸಂದಣಿಸಿ ರೋಮಾಂಚ= ಮೀಸೆಯನ್ನು ಬೆರಳಿನಿಂದದ ತಿರುಹುತ್ತಾ, ಮುಗುಳುನಗೆ ಸೂಸುತ್ತಾ, ಹರ್ಷದಿಂದ ಉಬ್ಬಿ ಮೈಮರೆತು, ಅವನ ದೇಹದಲ್ಲಿ ರೋಮಾಂಚನವು ಸಂದಣಿಸಲು,// ಕೆಲಬಲದ+ ಇಂದುಮುಖಿಯರ ನೋಡಿದನು= ತನ್ನ ಆಚೇ ಈಚೆ ಸುತ್ತಲೂ ಇದ್ದ ಅಂದದ ಹೆಂಗೆಳೆಯರನ್ನು ನೋಡಿದನು. ನಲವಿಂದ ನುಡಿದನು ತನ್ನ ಪೌರುಷತನದ ಪರಿಣತೆಯ= ಅವರ ಎದುರಲ್ಲಿ ಆನಂದದಿಂದ. ತನ್ನ ಪೌರುಷತನದ ಪರಿಣತೆಯನ್ನು ಹೇಳಿದನು.