Karnata Bharata Kathamanjari 1.36.15_22
Karṇāṭa Bhārata Kathāmañjarī 1.36.15_22
- Language
- Kannada
1.36.15_22
ಹಿಡಿದು ರಾಜ್ಯವ ಕೊಂಡು ಹೆಂಗುಸ
ಬಡಿದು ಪಾಂಡವ ರಾಯರನು ಹೊರ
ವಡಿಸಿ ಕೊಬ್ಬಿದ ಭುಜಬಲವನೆನ್ನೊಡನೆ ತೋರಿದನೆ
ಬಡ ಯುಧಿಷ್ಠಿರನೆಂದು ಬಗೆದನೆ
ಕಡುಗಿದೊಡೆ ಕೌರವನ ಕೀರ್ತಿಯ
ತೊಡೆವೆನರಿಯನಲಾಯೆನುತ ಸುಕುಮಾರ ಖತಿಗೊಂಡ ೧೭
ಹಿಡಿದು ರಾಜ್ಯವ ಕೊಂಡು ಹೆಂಗುಸ ಬಡಿದು ಪಾಂಡವರಾಯರನು ಹೊರವಡಿಸಿ ಕೊಬ್ಬಿದ ಭುಜಬಲವನು+ ಎನ್ನೊಡನೆ ತೋರಿದನೆ= ಪಾಂಡವರನ್ನು ಹಿಡಿದು (ಜೂಜಿಗೆ ಕರೆದು) ರಾಜ್ಯವವನ್ನು ಕಸಿದುಕೊಂಡು, ಹೆಂಗುಸನ್ನು ಬಡಿದು- ದ್ರೌಪದಿಯನ್ನ ಎಳೆದು ತಂದು ಹೊಡೆದು, ಪಾಂಡವರಾಯರನ್ನು ರಾಜ್ಯದಿಂದ ಹೊರಹೊಂಡಿಸಿ, ಕೌರವನು ತನ್ನ ಕೊಬ್ಬಿದ ಭುಜಬಲವನ್ನು- ಶೌರ್ಯವನ್ನು+ ಎನ್ನೊಡನೆ- ತನ್ನಡನೆ ತೋರಿಸಿದನೆ?// ಬಡ ಯುಧಿಷ್ಠಿರನೆಂದು ಬಗೆದನೆ= ತಾನು ಈ ಉತ್ತರನು, ಬಡ ಯುಧಿಷ್ಠಿರನೆಂದು ಬಗೆದನೆ- ತಿಳಿದುಕೊಂಡನೆ?// ಕಡುಗಿದೊಡೆ ಕೌರವನ ಕೀರ್ತಿಯ ತೊಡೆವೆನು+= (ಕಡುಗು- ಗಟ್ಟಿಯಾಗು) ಕಡುಗಿದೊಡೆ- ತಾನು ಸಿಟ್ಟಾಗಿ ನಿಂತರೆ ಕೌರವನ ಕೀರ್ತಿಯ ತೊಡೆವೆನು- ನಾಶಮಾಡುವೆನು.// ಅರಿಯನಲಾ!- ಇದನ್ನು ಕೌರವ ತಿಳಿಯದೇ ಹೋದನಲ್ಲಾ!+ ಯ+ ಎನುತ ಸುಕುಮಾರ ಖತಿಗೊಂಡ- ಎಂದು ಹೇಳುತ್ತಾ ಉತ್ತರ ಕೊಮಾರ ಕೋಪತಾಳಿದನು.