Karnata Bharata Kathamanjari 1.36.19_23
Karṇāṭa Bhārata Kathāmañjarī 1.36.19_23
- Language
- Kannada
1.36.19_23
ಜವನ ಮೀಸೆಯ ಮುರಿದನೋ= ಯಮನ ಮೀಸೆಯನ್ನು ತಿರುಚಿದಂತೆ ಆಗಿದೆ, ಭೈರವನ ದಾಡೆಯನಲುಗಿದನೊ= ಕಾಲಭಯರವನ ಕೋರೆದಾಡೆಯನ್ನು ಅಲುಗಾಡಿಸಿದಂತಾಗಿದೆ, ಮೃತ್ಯುವಿನ ಮೇಲುದ ಸೆಳೆದನೋ= ಮಲಗಿದ್ದ ಮೃತ್ಯವಿನ ಮುಸುಕನ್ನು ತೆಗೆದು ಕರೆದಂತಾಗಿದೆ, ಕೇಸರಿಯ ಕೆಣಕಿದನೊ= ಸಿಂಹವನ್ನು ಕೆನಕಿದಂತಾಗಿದೆ, ಬವರವನು ತೊಡಗಿದನಲಾ ಕೌರವನು+= ಯುದ್ಧವನ್ನು ಆರಂಬಿದ್ದಾನಲ್ಲಅ ಈ ಕೌರವನು; ಅಕಟ ಮರುಳಾದನು+ ಎಂದು ಆ ಯುವತಿಯರ ಮೊಗ ನೋಡುತ+ ಉತ್ತರ ಬಿರುದ ಕೆದರಿದನು= ತನ್ನನ್ನು ಕೆಣಕಿ ಮರುಳಾದನು, ಮೂರ್ಖ ಕೆಲಸ ಮಾಡಿದನು, ಹುಚ್ಚುಕೆಲಸ ಮಾಡಿದನು, ಎಂದು ಆ ಯುವತಿಯರ ಮುಖವನ್ನು ನೋಡುತ್ತಾ ಉತ್ತರನು ತನ್ನ ಪೌರುಷವನ್ನು ಕೊಚ್ಚಿಕೊಂಡನು.