Karnata Bharata Kathamanjari 1.36.20_24
Karṇāṭa Bhārata Kathāmañjarī 1.36.20_24
- Language
- Kannada
1.36.20_24
ಆರೊಡನೆ- ಆರ+ಒಡನೆ ಕಾದುವೆನು= ಯಾರೆಡನೆ ಯುದ್ಧಮಾಡಲಿ, ಕೆಲಬರು ಹಾರುವರು= ಕೆಲವರು ಬ್ರಾಹ್ಮಣರು - ಕೊಲ್ಲುವಂತಿಲ್ಲ (ದ್ರೋಣ ಅಸ್ವತ್ಥಾಮ, ಕೃಪ); ಕೆಲರು+ ಆಂತಕನ ನೆರೆಯೂರವರು= ಅದರಲ್ಲಕೆಲವರು ಮುಪ್ಪಿನ ಮುದುಕರು, ಅಂತಕನ- ಯಮನ ಊರಿನ ಪಕ್ಕದ ಊರಿಗೆ ಆಗಲೇ ಹೋಗಿದ್ದಾರೆ. (ಮುಟ್ಟಿದರೆ ಸಾಯುವರು - ಭೀಷ್ಮ ವಿದುರರು ಮುದುಕರು) ಕೆಲರು+ ಅಧಮ ಕುಲದಲಿ ಸಂದು ಬಂದವರು= ಕೆಲವರು ಕ್ಷತ್ರಿಯರೊಡನೆ ಯುದ್ಧಮಅಡಲು ಯೋಗ್ಯರಲ್ಲದ ಕುಲದವರು (ಕರ್ಣ); ವೀರರೆಂಬವರು+ ಇವರು ಮೇಲೆ+ ಇನ್ನಾರ ಹೆಸರುಂಟು+ ಅವರೊಳು+ = ಇವರೇ ಆ ಕೌರವನಸೈನ್ಯದಲ್ಲಿ ವೀರರು ಎಂದು ಬೀಗುವವರು! ಇವರಲ್ಲಿ ತನಗೆ ಸಮಾನರಾದ ವಿರರೇ ಇಲ್ಲ, ಯಾರೊಡನೆ ಯುದ್ಧಮಾಡಲಿ, ಎಂದು ಕುಮಾರ, ನೆಣಗೊಬ್ಬಿನಲಿ ನುಡಿದನು ಹೆಂಗಳ+ ಇದುರಿನಲಿ= ಹೀಗೆ ನೆಣದ ಕೊಬ್ಬು- ಮಾಂಸದ ಕೊಬ್ಬುನಿಂದ ಹೆಂಗಸರ ಎದುರಿನಲ್ಲಿ ಉತ್ತರಕುಮಾರ ಹೇಳಿದ.