Pramāṇa · Search · About · API

Karnata Bharata Kathamanjari 1.36.22_26

Karṇāṭa Bhārata Kathāmañjarī 1.36.22_26

Language
Kannada

1.36.22_26

ಖಳನ ಮುರಿವೆನು ಹಸ್ತಿನಾಪುರದೊಳಗೆ ಠಾಣಾಂತರವನು+ ಇಕ್ಕುವೆ= ದುಷ್ಟ ದುರ್ಯೋಧನನ್ನು ಕೊಂದು ಹಾಕುತ್ತೇನೆ, ಹಸ್ತಿನಾಪುರಕ್ಕೆ ಧಾಳಿ ಇಟ್ಟು ಅಲ್ಲಿ ನಮ್ಮ ಹೊಸ ಠಾಣೆಯನ್ನು ಹೂಡುವೆನು, ತೊಲಗಿಸುವೆ ಕೌರವನ ಸೇನೆಯ ಧೂಳಿಪಟ ಮಾಡಿ= ಕೌರವನ ಸೇನೆಯನ್ನು ಸೋಲಿಸಿ ಧೂಳಿಪಟ ಮಾಡಿ ತೊಲಗಿಸುವೆ- ಓಡಿಸುತ್ತೇನೆ. ಗೆಲವ ತಹೆನೆಂದು+ ಕೌರವನ ಮೇಲೆ ವಿಜಯವನ್ನು ಸಾಧಿಸುತ್ತೇನೆ. ಎಂದ ಉತ್ತರನು ಕೋಮಲೆಯರ+ ಇದಿರಲಿ- ಎದುರಿನಲ್ಲಿ ಬಾಯ್ಗೆ- ಬಾಯಿಗೆ ಬಂದುದ ಗಳಹುತಿದ್ದನು- ಹೇಳುತ್ತಿದ್ದನು; ಬೇಕು ಬೇಡ+ ಎಂಬವರ ನಾ ಕಾಣೆ. ವೈಶಂಪಾಯನ ಮುನಿಯು ನಾನು ಕಾಣೆ- ತಿಳಿಯಲಾರೆ ಎಂದನು