Pramāṇa · Search · About · API

Karnata Bharata Kathamanjari 1.36.23_27

Karṇāṭa Bhārata Kathāmañjarī 1.36.23_27

Language
Kannada

1.36.23_27

ಉತ್ತರನು ಮುಂದುವರಿದು, ಗಾಂಗೇಯನನ್ನು ಅವನ ಶಕ್ತಿಯನ್ನು ನಾನು ಅರಿಯನೇ - ತಿಳಿದಿಲ್ಲವೇ!, ತಾನು+ ಆರಿಯದವನೇ ದ್ರೋಣ- ದ್ರೋಣನು ನನಗೆ ತಿಳಿಯದವನೇ!; ಕುಲದಲಿ ಕೊರತೆಯೆನಿಸುವ ಕರ್ಣನೆಂಬವನು+ ಎನಗೆ ಸಮಬಲನೆ- ಕೆಳ-ಕುಲದಲ್ಲಿ ಜನಿಸಿದ ದಾಸಿಪುತ್ರ ತನಗೆ ಸಮಬಲನೆ! ಅಲ್ಲವೇ ಅಲ್ಲ! ಬರಿಯ ಬಯಲಾಡಂಬರದಿ- ಸತ್ವ ಇಲ್ಲದ ಆಡಂಬರದಿಂದ ಕೇವಲ ಗೋವುಗಳನ್ನು ಹಿಡಿದರೆ-> ಬರಿ ತುರುವ ಹಿಡಿದೊಡೆ, ತನ್ನ ಹೆಂಡಿರ ಸೆರೆಯ ತಾರದೆ ಮಾಣೆನು- ಬಿಡೆನು+ ಎಂದನು ನಾರಿಯರ ಮುಂದೆ= ಅವರಹೆಂಡತಿಯರನ್ನು ಸೆರೆಹಿಡಿದು ತರದೆ ಬಿಡುವುದಿಲ್ಲ ಎಂದು ಆ ಹೆಂಗಳೆಯರ ಎದುರಲ್ಲಿ ಆರ್ಭಟಿಸಿದನು.