Pramāṇa · Search · About · API

Karnata Bharata Kathamanjari 1.36.25_29

Karṇāṭa Bhārata Kathāmañjarī 1.36.25_29

Language
Kannada

1.36.25_29

ಸಾರಥಿಯ ಶಿವ ಕೊಟ್ಟನಾದೊಡೆ ಮಾರಿಗೆ+ ಉಬ್ಬಸವಾಗದೆ+ = ದೇವ ಶಿವನು ಸಾರಥಿಯನ್ನು ನನಗೆ ಕೊಟ್ಟಿದ್ದೇ ಆದರೆ, ರಕ್ತಕುಡಿದು ಮಾರಿಗೆ ಉಬ್ಬಸವಾಗದೆ- ಏದುಸಿರು ಬರದೆ ಇರುವುದೆ? ಅಂತಕ ನೂರು ತುಂಬದೆ= ಯಮನ ಪಟ್ಟಣ ಸತ್ತವರ ಪ್ರೇತಗಳಿಂದ ತುಂಬದೆ ಇರುವುದೇ?, ದೊಳ್ಳು ನೂಕದೆ ರಣಪಿಶಾಚರಿಗೆ= ರಣರಂಗದಲ್ಲಿರುವ ರಣಪಿಶಾಚರುಗಳಿಗೆ ಹೆಣಗಳನ್ನು ತಿಂದು ಹೊಟ್ಟೆ ಮುಂದಕ್ಕೆ ಚಾಚದೇ ಇರುವುದೇ?, ದೋರೆ+ ಗ+ ಕರುಳಲಿ ದಾನವಿಯರ+ ಒಡಲು+ ಏರು ಹತ್ತದೆ= ರಣರಂಗಕ್ಕೆ ಮಾನವರ ರಕ್ತವನ್ನು ಕುಡಿಯುವ ರಕ್ಕಸಿಯರ ಹೊಟ್ಟೆ ಏರುಹತ್ತದೇ - ಉಬ್ಬಿ ಹೋಗದೇ?, ಹಬ್ಬವಾಗದೆ ಭೂರಿ ಬೇತಾಳರಿಗೆ= ಬೇತಾಳಗಳಿಗೆ ಸತ್ತವರ ಹೆಣದ ಊಟದಿಂದ ಭೂರಿ- ದೊಡ್ಡ ಹಬ್ಬವಾಗದೇ?, ಹೋಹುದೆ ಬರಿದೆ ರಣವು (ಯುದ್ಧ)+ ಎಂದ-= ಯುದ್ಧವು ಹಾಗೆಯೇ ಸುಮ್ಮನೇ ಹೋಗುವುದೇ?' ಎಂದ ಉತ್ತರ.