Karnata Bharata Kathamanjari 1.36.27_31
Karṇāṭa Bhārata Kathāmañjarī 1.36.27_31
- Language
- Kannada
1.36.27_31
ನರನ ಸಾರಥಿಯೆಂದು ನೀನು+ ಉತ್ತರೆಗೆ ಸೂಚಿಸಿ ತನ್ನನು+ ಈಗಳೆ ಕರೆಸು+ ಎನಲು= ಬೃಹನ್ನಳೆಯು ಹಿಂದೆ ನರನ- ಅರ್ಜುನನ, ಸಾರಥಿಯೆಂದು ನೀನು+ ಉತ್ತರೆಗೆ- ಉತ್ತರಕುಮಾರನ ತಂಗಿ ಉತ್ತರೆಗೆ ಸೂಚಿಸಿ- ಹೇಳಿ, ತನ್ನನು (ಅರ್ಜುನನ್ನು)+ ಈಗಳೆ ಕರೆಸು+ ಎನಲು- ಎಂದು ದ್ರೌಪದಿಗೆ ಹೇಳಲು,//ಕೈಕೊಂಡು- ಆ ಮಾತನ್ನು ಅನುಸರಿಸಿ, ದುರುಪದಿ ಬಂದಳು+ ಒಲವಿನಲಿ- ದ್ರೌಪದಿ ಸಂತಸದಿಂದ ಉತ್ತರೆಯ ಬಳಿಗೆ ಬಂದಳು;// ತರುಣಿ ಕೇಳು+ ಅರ್ಜುನನ ಸಾರಥಿ ವರ ಬೃಹನ್ನಳೆ ಖಾಂಡವಾಗ್ನಿಯ ಹೊರೆದನು+ ಇವ ತಾನು+ ಎಂದು ಸತಿಯು+ ಉತ್ತರೆಗೆ ಹೇಳಿದಳು= ತರುಣಿ- ಉತ್ತರೆಯೇ ಕೇಳು+ ವರ- ಶ್ರೇಷ್ಠನಾದ ಈ ಬೃಹನ್ನಳೆಯು ಅರ್ಜುನನ ಸಾರಥಿಯಾಗಿದ್ದನು, ಅವನು ಖಾಂಡವಾಗ್ನಿಯ- ಖಾಂಡವವನವನ್ನು ಅಗ್ನಿಯು ಸುಡುವಾಗ ಹೊರೆದನು- ಅರ್ಜುನನ ಸಾರಥ್ಯದ, ಇವ ತಾನು+- ಇವನು - ಬೃಹನ್ನಳೆಯು ಆ ಹೊರೆಯನ್ನು ವಹಸಿದ್ದನು+ ಎಂದು ಸತಿಯು- ದ್ರೌಪದಿಯು+ ಉತ್ತರೆಗೆ ಹೇಳಿದಳು.