Karnata Bharata Kathamanjari 1.36.29_33
Karṇāṭa Bhārata Kathāmañjarī 1.36.29_33
- Language
- Kannada
1.36.29_33
ತಂಗಿ ಹೇಳೌ ತಾಯೆ ನಿನಗೆ+ ಈ ಸಂಗತಿಯನು+ ಆರೆಂದರು+= ತಂಗೀ, ಹೇಳು ತಾಯೀ, ನಿನಗೆ ಈ ಸಂಗತಿಯನ್ನು ಆರೆಂದರು- ಯಾರು ಹೇಳಿದರು? ಆವವನು+ ಅಂಗವಣೆಯುಳ್ಳವನೆ?= ಯಾರ ಕಡೆಯವನು, ಸಾಮರ್ಥ್ಯ ಉಳ್ಳವನೇ, ಸಾರಥಿತನದ ಕೈಮೆಯಲಿ=ವಿದ್ಯೆಯಲ್ಲಿ? ಮಂಗಳವಲೇ,= ಬಹಳ ಒಳ್ಳೆಯದು, ಬಳಿಕ ರಣದೊಳ ಭಂಗನು+ ಅಹೆ ನಿನ್ನಾಣೆ= ಅವನು ಸಾಮರ್ಥ್ಯವಿಲ್ಲದವನಾದರೆ ಬಳಿಕ ಯುದ್ಧದಲ್ಲಿ ಭಂಗಪಟ್ಟವನು- ಸೋತವನು ಅಹೆನು- ಆಗುವೆನು; ತನ್ನಯ ತುಂಗ ವಿಕ್ರಮತನವನು+ ಉಳುಹಿದೆ ಹೇಳು ಹೇಳೆಂದ= ತನ್ನ ತುಂಗ- ಶ್ರೇಷ್ಠ ವಿಕ್ರಮತನವನು- ಪರಾಕ್ರಮವನ್ನು+ ಉಳುಹಿದೆ- ಉಳಿಸಿದೆ, ಹೇಳು ಹೇಳೆಂದ- ಅದು ಯಾರು ಹೇಳು ಹೇಳು- ಬೇಗ ಹೇಳು ಎಂದ.