Karnata Bharata Kathamanjari 1.36.36_39
Karṇāṭa Bhārata Kathāmañjarī 1.36.36_39
- Language
- Kannada
1.36.36_39
ಎಳೆಪ್ರಾಯದ ಸುಂದರಿ ಉತ್ತರೆ ನೆಡೆದು ಬರುತ್ತಿರುವ ವೈಕರಿಯನ್ನು ಕವಿ ಹೇಳುತ್ತಿದ್ದಾನೆ. ಕುರುಳ ತಿದ್ದುತ= ಮುಂಗುರುಳನ್ನು ಕೈಯಿಂದ ತಿದ್ದಿಕೊಳ್ಳುತ್ತಾ, ಮೊಲೆಗೆ ಮೇಲುದ ಸರಿವುತ+= ನೆಡೆಯವಾಗ ಸರಿದ ಸೆರಗನ್ನು ಸರಿಪಡಿಸಿಕೊಳ್ಲುತ್ತಾ, ಏಕಾವಳಿಯ ಮೆಲ್ಲನೆ ತಿರುಪಿ ಹಾಯ್ಕುತ= ತನ್ನೇಕಾವಳಿ ಸರದ ತುದಿಯನ್ನು ಕೈಯ್ಯಲ್ಲಿ ತಿರುಪಿ ಹಾಕುತ್ತಾ, ಬಿಡುಮುಡಿಯನು (ಬಿಟ್ಟ ಮುಡಿ -ಜಡೆ?)+ ಎಡಗೈಯೊಳೊಂದಿಸುತ= ಎಡದಕೈಯಿಂದ ಹಿಂದಲೆಯ ಜಡೆಯನ್ನು (ಇಳಿಬಿಟ್ಟ ಕೂದಲನ್ನು? - ಹಿಂದೆ ಹಾಗೆಯೇ ಕೂದಲನ್ನು ಇಳಿಬಿಡುವ ಪದ್ದತಿ ಇರಲಿಲ್ಲ. 'ಬಿಟ್ಟ ಮಂಡೆಯ' ಎನ್ನುವುದು ದುಃಖದ ಸೂಚಕ) ಹೊಂದಿಸಿಕೊಳ್ಳ್ಲುತ್ತಾ, ವರ ನಿಖಾರಿಯ ನಿರಿಯ ರಭಸದ ಚರಣದಂದುಗೆ ದನಿಯ ಗಮನದ (ನೆಡಿಗೆ) ಭರದಿ= ನಿಖಾರಿ(ಜರಿ?) ಸೀರೆಯ ನಿರಿಗೆಯ ರಭಸದೊಂದಿಗೆ ಕಾಲಿನ ಅಂದುಗೆಯ (ಕಡಗದ) ಸದ್ದು ಮಾಡತ್ತಾ, ವೇಗದ ನಡಿಗೆಯಲ್ಲಿ// ಕಿರುಬೆಮರಿಡುತ ನಡೆತರುತಿರ್ದಳು+ ಇಂದುಮುಖಿ= ಇಂದುಮುಖಿ ಉತ್ತರೆ ಸಣ್ಣಗೆ ಬೆವರುತ್ತಾ ನೆಡೆದುಬರುತ್ತಿದ್ದಳು. (ಪ್ರಾಯದ ಹೆಣ್ಣಿನ ಅವಸರದ ನಡಿಗೆಯ ಪರಿಯನ್ನು ಕವಿಯು ಸೂಕ್ಷ್ಮವಾಗಿ ಗಮನಿಸಿದ ಬಗೆ ಹೀಗಿದೆ.)