Karnata Bharata Kathamanjari 1.36.7_13
Karṇāṭa Bhārata Kathāmañjarī 1.36.7_13
- Language
- Kannada
1.36.7_13
ಏಳು ಮನ್ನೆಯ ಗಂಡನಾಗು= ಗೋಪಾಲಕನು ಉತ್ತರನಿಗೆ, 'ಏಳು ಮನ್ನೆಯ- ಶೂರರ, ಗೌರವವುಳ್ಳವರ ಗಂಡನಾಗು- ಮುಖ್ಯನಾಗು, ನೃಪಾಲ ಕೌರವ ರಾಯ ತುರುಗಳ ಕೋಳ ಹಿಡಿದನು= ರಾಜ ಕೌರವರಾಯನು ತುರುಗಳ ಕೋಳ(ಕುಟ್ಟುವ ಕೆಲಸಕ್ಕೆ ಉಪಯೋಗಿಸುವ ಕಬ್ಬಿಣದ ಒಂದು ಉಪಕರಣ) ಹಿಡಿದನು= ನಮ್ಮ ಗೋವುಗಳ ಕೊರಳ ಹಗ್ಗವನ್ನು ಹಿಡಿದಿದ್ದಾನೆ. ಸೇನೆ ಬಂದುದು ಧರಣಿಯ+ ಅಗಲದಲಿ ದಾಳಿ ಬರುತಿದೆ+= ಭೂಮಿಯ ಅಗಲಕ್ಕೂ ತುಂಬಿದ ದೊಡ್ಡ ಸೇನೆ ಬಂದಿದೆ. ಅದು ದಾಳಿ ಮಾಡಲು ಬರುತ್ತಿದೆ. ತಡಮಾಡದೆ ನಿನ್ನ ಸೈನಿಕರಗಳನ್ನೂ, ಕುದುರೆಗಳನ್ನೂ ಕರೆಸಿಕೋ. ರಾಣಿವಾಸದ ಗೂಳೆಯವ ತೆಗೆಸು+ ಎಂದು ನುಡಿದನು ಬಿನ್ನಹದ ಬಿರುಬ -ಗಡುಸಾದ= ರಾಣಿವಾಸದ ಗುಂಪನ್ನು ತೆಗೆಸು, ಎಂದು ಗೋವಳಮು ಗಡುಸಾದ ಭಾಷೆಯಲ್ಲಿ ಬಿನ್ನಹ - ವಿಜ್ಞಾಪನೆಯನ್ನು ನುಡಿದನು- ಮಾಡಿದನು. -