Karnata Bharata Kathamanjari 1.37.10_16
Karṇāṭa Bhārata Kathāmañjarī 1.37.10_16
- Language
- Kannada
1.37.10_16
ಏಕೆ ಸಾರಥಿ ರಥವ ಮುಂದಕೆ ನೂಕಿ ಗಂಟಲ ಕೊಯ್ವೆ= ಸಾರಥಿಯೇ ರಥವನ್ನು ಮುಂದಕ್ಕೆ ಓಡಿಸಿ ನನ್ನ ಗಂಟಲನ್ನು ಕೊಯ್ಯವ ಕೆಲಸ ಮಾಡುವೆ? ಸುಡು ಸುಡು ಕಾಕಲಾ(ಕಾಕು- ಕೆಟ್ಟ ಮನುಷ್ಯ) ಕಣ್ಣು+ ಒಡೆದವೇ= ಸುಡು ಸುಡು, ಕೇಡಿಗನಲಾ! ನೋಡುವ ಆ ನಿನ್ನ ಕಣ್ಣುಗಳು ಒಡೆದವೇ? ಕಾಣಾ ಮಹಾಬಲವ= ಎದುರಿಗೆ ಆ ಮಹಾ ಸೈನ್ಯವನ್ನು ಕಾಣೋ ನೋಡೋ!? ನಾಕ (ದೇವಲೋಕ) ನಿಳಯರಿಗೆ+ ಅರಿದು= ಅದನ್ನು ಎದುರಿಸಲು ದೇವಲೋಕದ ವಾಸಿಗಳಿಗೂ ಅರಿದು- ಅಸಾದ್ಯ. ನಿನಗೆ ವಿವೇಕವು+ ಎಳ್ಳನಿತಿಲ್ಲ - ಎಳ್ಳಿನಷ್ಟೂ ಇಲ್ಲ, ತೆಗೆ ತೆಗೆಸಾಕು ವಾಘೆಯ ಮರಳಿ ಹಿಡಿ ತೇಜಿಗಳ ತಿರುಹೆಂದ= ನಿಲ್ಲಿಸು ಸಾಕು, ಕುದುರೆಯ ವಾಘೆಗಳನ್ನು ಹಿಡಿದು ತಿರುಗಿಸಿ ಹೊಡೆ ಎಂದ ಉತ್ತರ.