Pramāṇa · Search · About · API

Karnata Bharata Kathamanjari 1.37.13_19

Karṇāṭa Bhārata Kathāmañjarī 1.37.13_19

Language
Kannada

1.37.13_19

ನೋಡಿದನು ಕಲಿಪಾರ್ಥನು+ ಈ ಕೇಡಾಡಿ ಕೆದರಿದ ಕೇಶದಲಿ ಕೆಟ್ಟೋಡುತಿರಲು+= ಕಲಿಪಾರ್ಥನು ಈ ಕೇಡಾಡಿಯಾದ(ಕೆಡುಕನ್ನು ಮಾಡುವ) ಉತ್ತರನು ಕೆದರಿರುವ ಕೂದಲನ್ನು ಬಿಟ್ಟುಕೊಂಡು ಕೆಟ್ಟೋಡುತಿರಲು- ವೇಗವಾಗಿ ಓಡುತ್ತಿರುವುದನ್ನು ನೋಡಿದನು + // ಎಲೆ ಪಾಪಿ ಹಾಯ್ದನು ಹಿಡಿಯಬೇಕು ಎನುತ= ಎಲೆ ಪಾಪಿ- 'ಯುದ್ಧಬಿಟ್ಟೊಡುವ ಅಪರಾಧಿ', ಕೂಡೆ ಸೂಟಿಯೊಳು+ಅಟ್ಟಲು+ ಇಳೆಯು+ ಅಲ್ಲಾಡಲು+ ಅಹಿಪತಿ ಹೆದರಲು+= ತಕ್ಷಣ ಚುರುಕಾಗಿ ಬೆನ್ನಟ್ಟಿದನು, ಅವನ- ಅರ್ಜುನನ ಹೆಜ್ಜೆಯ ರಭಸಕ್ಕೆ ಭೂಮಿಯು ಅಲುಗಿ, ಅಹಿಪತಿ- ಭೂಮಿಯನ್ನು ಹೊತ್ತ ವಾಸುಕಿಯು ಹೆದರಿದನು- ಇದೇನು ಎಂದು! ಇತ್ತಲು ನೋಡಿ ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ= ಇತ್ತಲು= ಇತ್ತ ಕೌರವನ ಸೇನೆಯಲ್ಲಿ ಇದನ್ನು ನೋಡಿ ಇಡೀ ಕೌರವಸೇನೆ;/ ಕೆಡೆದುದು ನಗೆಯ ಕಡಲೊಳಗೆ= ನಗೆಯ ಸಮುದ್ರದಲ್ಲಿ ಬಿದ್ದಿತು- ಮುಳುಗಿತು.