Pramāṇa · Search · About · API

Karnata Bharata Kathamanjari 1.37.18_23

Karṇāṭa Bhārata Kathāmañjarī 1.37.18_23

Language
Kannada

1.37.18_23

ಹಲುಗಿರಿದು ಬಾಯೊಳಗೆ ಬೆರಳಿಟ್ಟು+ ಅಳುಕಿ ತಲೆವಾಗಿದನು= ನಾಚಿಕೆಯಿಂದ ಉತ್ತರಕೊಡಲಾಗದೆ, ಹಲ್ಲುಕಿರಿದು ಕೃತಕ ನಗುವನ್ನು ತೊರಿ, ನಾಚಿಕೆಯಿಂದ ತಲೆ ತಗ್ಗಿಸಿದನು. ಮತ್ತೆ ಹೇಳಿದನು, ಸಾರಥಿ ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು= ಸಾರಥಿಯೇ ನನ್ನನ್ನು ಬಿಟ್ಟು ಕಳಿಸಪ್ಪಾ! ನಿನ್ನ ಹೊಟ್ಟೆಯಲ್ಲಿ ಮತ್ತೆ ಹುಟ್ಟಿಬಂದವನು ಎಂದು ಕೊಳ್ಳುತ್ತೇನೆ./ ಕೊಳುಗುಳದೊಳು ಈ ಯೊಡ್ಡ ಮುರಿವ+ ಅಗ್ಗಳೆಯರು+ ಉಂಟೇ= ಯುದ್ಧದಲ್ಲಿ ಈ ದೊಡ್ಡ ಸೈನ್ಯವನ್ನು ಒಬ್ಬರೇ ಸೋಲಿಸುವ ಶ್ರೇಷ್ಠವೀರರು ಇದ್ದಾರೆಯೇ? ಲೋಗರಿಂದವೆ ಕೊಲಿಸದಿರು, ನೀ ಕುತ್ತಿ ಕೆಡಹು ಕಠಾರಿಯಿದೆ+ ಯೆ+ ಎಂದ= ನಿನಗೆ ನನ್ನನ್ನು ಸಾಯಿಸಬೇಕೆಂದಿದ್ದರೆ- ಅವರಿವರಿಂದ ಕೊಲ್ಲಿಸಬೇಡ, ನೀನೇ ಕೊಂದುಬಿಡು - ಇಗೋ ಕತ್ತಿಯನ್ನು ತೆಗೆದುಕೋ, ಎಂದ ಉತ್ತರ.