Karnata Bharata Kathamanjari 1.37.19_24
Karṇāṭa Bhārata Kathāmañjarī 1.37.19_24
- Language
- Kannada
1.37.19_24
ಮನದಲಿ+ ಒಡಲು+ ಒಡೆವಂತೆ ನಗುತ+ ಅರ್ಜುನನು ಗಜರಿದನು= ಅರ್ಜುನನು ಮನಸ್ಸಿನಲ್ಲಿ ಹೊಟ್ಟೆ ಬಿರಿಯುವಂತೆ ನಗುತ್ತಾ, ಗದರಿಸಿದನು;/ 'ಎಲವೊ ಸಭೆಯಲಿ ವನಜಮುಖಿಯರ ಮುಂದೆ ಸೊರಹಿದೆ ಬಾಯ್ಗೆ ಬಂದಂತೆ ಅನುವರದೊಳು+ ಏನಾಯ್ತು= 'ಎಲವೊ! ಸಭೆಯಲ್ಲಿ ವನಿತೆಯರ ಮುಂದೆ (ಸೊರಹು= ಅತಿಯಾಗಿ ಮಾತನಾಡು)ಸುರಹಿದೆ, ಬಾಯ್ಗೆ ಬಂದಂತೆ ಅತಿಯಾಗಿ ಜಂಬಕೊಚ್ಚಿದೆ./ ಅನುವರದೊಳು+ ಏನಾಯ್ತು= ಆದರೆ ಆನಂತರದ ಯುದ್ಧಭೂಮಿಯಲ್ಲಿ ಏನು ಮಾಡಿದೆ?/ ರಿಪು ವಾಹಿನಿಯನು+ ಇರಿಯದೆ ನಾಡ ನರಿಯವೊಲ್+ ಎನೆಗೆ ನೀ ಹಲುಗಿರಿಯೆ ಬಿಡುವೆನೆ ಕಾದು= ಯುದ್ಧಮಾಡು ನಡೆಯೆಂದ= ರಿಪು ವಾಹಿನಿಯನು- ಶತ್ರುಸೈನ್ಯದವನ್ನು ಹೊಡೆದುಹಾಕದೆ, ನಾಡ ನರಿಯವೊಲ್ - ನಾಯಿಯಂತೆ ಎನೆಗೆ-ನನಗೆ, ನೀ ಹಲುಗಿರಿಯೆ ಬಿಡುವೆನೆ ಕಾದು- ಯುದ್ಧಮಾಡು/ ನೀನು ಹಲ್ಲುಕಿರಿದರೆ, ಬಿಡುವುದಿಲ್ಲ, ಯುದ್ಧಮಾಡು ನಡೆಯೆಂದ, ಅರ್ಜುನ.