Karnata Bharata Kathamanjari 1.37.21_26
Karṇāṭa Bhārata Kathāmañjarī 1.37.21_26
- Language
- Kannada
1.37.21_26
ಹರುಕನೇ ನೀನು+, ಎಲವೊ ರಾಯರೊಳು+ ಉರುವ ನೃಪ ನಿಮ್ಮಯ್ಯ= ಹರುಕನೇ- ಕೈಲಾಗದವನೇ, ಅಲ್ಪನೇ ನೀನು+, ಎಲವೊ! ರಾಯರೊಳು+ ಉರುವ ನೃಪ ನಿಮ್ಮಯ್ಯ- ರಾಜರಲ್ಲಿ ಉತ್ತಮ ರಾಜನು ನಿನ್ನ ತಂದೆ.//ನೀನಿಂದು+ ಇರಿದು ಮೆರೆವ+ ಅವಸರವಲಾ ಜವ್ವನದ ಧುರಭರವು= ಯೌವನದಲ್ಲಿ ನೀನು ಇಂದು ಹೋರಾಡಿ ಮೆರೆಯುವ ಯದ್ಧಸಂಭ್ರಮವು ಅವಸರವಲಾ- ಬಂದಿದೆಯಲ್ಲಾ. ಸರಿ+ಗ+ ಕಳೆಯದ+ ಅಪಕೀರ್ತಿ ರವಿ ಶಶಿ ಮುರಿದು ಬೀಳ್ವನ್ನ ಬರವು+= ತೆಗೆದು ಹಾಕಲಾಗದ- ಕಳೆಯಲಾಗದ ಅಪಕೀರ್ತಿಸೂರ್ಯ ಚಂದ್ರರು (ಬೀಳುವವರಗೂ)ಇರುವವರೆಗೂ ಬರುವುದು. ಎಲೆ ನರ+ಗು+ ಕುರಿಯೆ ನಡೆ ಕಾಳಗಕೆ+ ಎನುತ ಹಿಡಿದೆಳೆದನು+ ಉತ್ತರನ= ಎಲೆ ಮಾನವ ಕುರಿಯೇ ಯುದ್ಧಮಾಡು ನೆಡೆ ಎಂದು ಉತ್ತರನನ್ನು ಹಿಡಿದು ಎಳೆದನು.