Karnata Bharata Kathamanjari 1.37.29_33
Karṇāṭa Bhārata Kathāmañjarī 1.37.29_33
- Language
- Kannada
1.37.29_33
ಎನ್ನವಂದಿಗ ರಾಜಪುತ್ರರಿಗೆ+ ಇನ್ನು ಮೊಗಸಲು(ಬಯಕೆ - ಯುದ್ಧದ ಅಪೇಕ್ಷೆ) ಬಾರದಿದೆ= ನನ್ನಂತಹ ಕ್ಷತ್ರಿಯ ರಾಜಪುತ್ರರಿಗೆ ಇನ್ನು ಇಲ್ಲಿ ಯುದ್ಧ ಮಾಡುವ ಮನಸ್ಸು ಬಾರದೆಹೋಗಿದೆ; ನೀನು+ ಎನ್ನ ಸಾರಥಿ ಮಾಡಿಕೊಂಡು+ ಈ ಬಲವ ಜಯಿಸುವೆಯ= ಇನ್ನು ನೀನು ನನ್ನನ್ನು ಸಾರಥಿ ಮಾಡಿಕೊಂಡು ಈ ದೊಡ್ಡಸೈನ್ಯವನ್ನು ಜಯಿಸುವೆಯ? ಅನ್ಯರನು ಮನಗಾಂಬು- ಅಲ್ಲದೆ ತನ್ನ ತಾ ಮನಗಾಂಬರೇ = ಮನುಷ್ಯ ಇನ್ನೊಬ್ಬರ ಶಕ್ತಿ ಗುಣವನ್ನು ತಿಳಿಯಬಹುದು, ಆದರೆ ತನ್ನ ಗುಣ ಮತ್ತು ಶಕ್ತಿಯನ್ನು ಕಾಣಲಾರ ಅಲ್ಲವೇ?// ಈ ಗನ್ನಗತಕವ ನಾವು ಬಲ್ಲೆವು ಬಿಟ್ಟು ಕಳುಹು+ ಎಂದ= ನಿನ್ನ ತಂತ್ರವನ್ನು ನಾವು ತಿಳಿದಿದ್ದೇವೆ- ನಮ್ಮನ್ನು ಏನೋ ನೆವದಿಂದ ಶತ್ರುಗಳ ಬಲೆಗೆ ಕೆಡಗುವುದು, ಅಲ್ಲವೇ? ಅದೆಲ್ಲಾ ನಅಟಕ ಬೇಡ - ನನ್ನನ್ನು ಬಿಟ್ಟು ಕಳುಹಿಸು ಸಾಕು ಎಂದ.