Pramāṇa · Search · About · API

Karnata Bharata Kathamanjari 1.37.32_36

Karṇāṭa Bhārata Kathāmañjarī 1.37.32_36

Language
Kannada

1.37.32_36

ಎಲೈ ಉತ್ತರ, (ಆ) ಮರನನು+ ಎರು+ ಇದರೊಳಗೆ ಪಾಂಡವರು+ ಇರಿಸಿ ಹೋದರು ಕೈದುಗಳ= ಎಲೈ ಉತ್ತರನೇ, ಆ ಈ ಶಮೀ ಮರವನ್ನು+ ಎರು- ಹತ್ತು+ ಇದರೊಳಗೆ ಪಾಂಡವರು+ ಇರಿಸಿ ಹೋದರು- ಹೋಗಿದ್ದಾರೆ ಕೈದುಗಳ- ಆಯುಧಗಳನ್ನು.// ಮಿಗೆ ಹರಣ ಭರಣ ಕ್ಷಮೆಗಳಲಿ ನೀನು+ ಎನಗೆ ನೀಡು+ ಎನಲು= ಮಿಗೆ ಮತ್ತೆ, ತೆಗೆದು ಹಿಡಿದುಕೊಂಡು ಎಚ್ಚರಿಕೆಯಿಂದ ನನಗೆ ಕೊಡು,' ಎಂದನು ಅರ್ಜುನ.// ಅರಸು ಮಕ್ಕಳು ಮುಟ್ಟಲು+ ಅನುಚಿತ ಮರದ ಮೇಲಣ ಹೆಣನು+ ಇದೇನೈ, ವರ ಬೃಹನ್ನಳೆ ಮತ್ತೆ ಕೆಲಸವ ಹೇಳು ತನಗೆಂದ= ಅದಕ್ಕೆ ಉತ್ತರನು,'ಅರಸು ಮಕ್ಕಳು ಮುಟ್ಟಲು ಅನುಚಿತವಾದದ್ದು, ಮರದ ಮೇಲಿರುವ ಹೆಣವು; ಇದೇನಯ್ಯಾ ಗುಣವಂತ ಬೃಹನ್ನಳೆ, ಮತ್ತೆ- ಬೇರೆ ಕೆಲಸವನ್ನು ಹೇಳು ತನಗೆ,' ಎಂದ.