Karnata Bharata Kathamanjari 1.37.51_51
Karṇāṭa Bhārata Kathāmañjarī 1.37.51_51
- Language
- Kannada
1.37.51_51
ರಾಯ ಧರ್ಮಜ ಬಾಳುಗೆ+ ಎನುತ= ಧರ್ಮರಾಯನಿಗೆ ಶುಭವಾಗಲಿ ಎಂದು ಹಾರೈಸಿ, ನಿಜ+ ಆಯುಧದ ಗುರುವಿಂಗೆ+ ಎರಗಿ= ತನ್ನ ಗುರುವಿಗೆ ನಮಿಸಿ, ಸುರರಾಯ ನಂದನನು- ಇಂದ್ರನ ಮಗ ಅರ್ಜುನನು+ ಒಲವಿನಲಿ ಗಾಂಡಿವವ ಜೇವಡಿಸಿ= ಸಂತಸದಿಂದ ಗಾಂಡೀವವನ್ನು ಠೇಂಕಾರ ಮಾಡಿದನು.// ರಾಯ ಕುವರನ ಸೂತತನದ ವಿಡಾಯಿಯ(ಸಂಭ್ರಮ- ಜಾಣತನ)+ ಅರಿಯಲು ಬಹುದು+ ಎನುತ ಸಮರ+ ಆಯತ (ಅತಿಶಯ)+ ಅಸ್ತ್ರನು ಪಾರ್ಥ ಮೈದೋರಿದನು ಪರಬಲಕೆ= ರಾಜ ಕುಮಾರನ ಸೂತತನದ ಸಂಭ್ರಮವನ್ನು ಅರಿಯಬಹುದು ಎನ್ನುತ್ತಾ ಯುದ್ಧದ ಅತಿಶಯ ಅಸ್ತ್ರ ವಿಶಾರದ ಪಾರ್ಥನು ವೈರಿಸೈನ್ಯಕ್ಕೆ ಮೈದೋರಿದನು- ಪ್ರತ್ಯಕ್ಷನಾದನು, ತೋರಿಕೊಂಡನು, ಎದುರುನಿಂತನು.