Karnata Bharata Kathamanjari 1.37.54_55
Karṇāṭa Bhārata Kathāmañjarī 1.37.54_55
- Language
- Kannada
1.37.54_55
ಉದಯದ+ ಅರುಣನ ಕರುವ ಹಿಡಿದ+ ಅಂದದಲಿ= ಸೂರ್ಯ ಉದಯದ ಕಾಲದಲ್ಲಿ ಸೂರ್ಯನ ಸಾರಥಿಯಾದ ಅರುಣನ-ಕರುವ- ಕುದುರೆಯನ್ನು ಹಿಡಿದ+ ಅಂದದಲಿ- ಹಿಡಿದ ರೀತಿಯಲ್ಲಿ//ವರ್ಣಚ್ಛವಿಯಲಿ+ ಒಪ್ಪುವ= ತಿಳಿಕೆಂಪು ಬಣ್ನದಲ್ಲಿ ಶೋಭಿಸುವ, ತಳತಳಸಿ ಬೆಳಗುವ ಕೊಡನ ಹಳವಿಗೆಯ- ಬಾವುಟದ, ಗದಗದಿಪ ಮಣಿಮಯದ ತೇರಿನ- ರಥದ, ಕದನ ಕೋಳಾಹಳನು-ಯುದ್ಧ ವಿಶಾರದನು, ಗರುಡಿಯ ಸದನ ಸರ್ವಜ್ಞನನು= ಯುದ್ಧವಿದ್ಯೆಯನ್ನು ಪೂರ್ಣ ಅರಿತವನು, ನೋಡೈ ದ್ರೋಣನು+ ಅವನು+ ಎಂದ.(ಸೂರ್ಯೋದಯದ ಕಾಲದಲ್ಲಿ ದಿಗಂತದಲ್ಲಿ ಏರುತ್ತಿರುವ ಸೂರ್ಯನು, ದಿಗಂತಕ್ಕೆ ಸ್ವಲ್ಪವೇ ತಾಗಿದಾಗ ಚಿನ್ನದ ಕೊಡದಂತೆ ಕಾಣುವನು- ಆಗುಂಬೆ ಸೂರ್ಯಾಸ್ತ ದೃಶ್ಯ)