Pramāṇa · Search · About · API

Karnata Bharata Kathamanjari 1.37.60_61

Karṇāṭa Bhārata Kathāmañjarī 1.37.60_61

Language
Kannada

1.37.60_61

ಅವನ ಬಲವಂಕದಲಿ ನಿಂದವನು+ ಅವನು ಭೂರಿಶ್ರವನು= ಅವನ ಬಲಗಡೆ ಅಂಕದಲ್ಲಿ ನಿಂತವನು- ಅವನು ಭೂರಿಶ್ರವನು,/ ಆ ಭುವನಪತಿಯ+ ಎಡವಂಕದಲಿ ನಿಂದವ ಜಯದ್ರಥನು= ಮತ್ತೆ ಆ ಕೌರವನ+ ಎಡಗದೆಯ ರಣಭೂಮಿಯಲ್ಲಿ ನಿಂತವನು ಜಯದ್ರಥನು,/ ತವತವಗೆ ಬಲುಗೈಗಳು ಎನಿಸುವ ಶಿವನ ನೊಸಲಂದದಲಿ ಮೆರೆವವರು+ ಅವನಿಪಾಲಕನ+ ಅನುಜರನು ನೋಡೆಂದನು+= ತಮತವಗೆ ಬೆಂಬಲಿಗರಾಗಿ ಬಲುಗೈಗಳು ಎಂದುಕರೆದುಕೊಳ್ಳವ, ಶಿವನ ಹಣೆಗಣ್ಣಿನಂತೆ ಮೆರೆಯುವವರು ಆ ರಾಜನ ತಮ್ಮಂದಿರು, ಅವರನ್ನು ನೋಡು ಎಂದನು ಪಾರ್ಥ. (ಅಂಕ- ಯುದ್ಧಭೂಮಿ)