Karnata Bharata Kathamanjari 1.38.16_15
Karṇāṭa Bhārata Kathāmañjarī 1.38.16_15
- Language
- Kannada
1.38.16_15
ಅಶ್ವತ್ಥಾಮನು ಕರ್ಣನ್ನು ಕುರಿತು, 'ನಗುವೆ ವಿಪ್ರರನು+ ಆವ ರಾಯರ ಮಗನು ಹೇಳಾ= ವಿಪ್ರರನ್ನು - ಬ್ರಾಹ್ಮಣರನ್ನು ನೋಡಿ ಅಪಹಾಸ್ಯಮಾಡಿ ನಗುವೆಯಲ್ಲಾ! ನೀನು ಯಾವ ಕ್ಷತ್ರಿಯ ರಾಜನ ಮಗನಯ್ಯಾ?// ದಾನ ಧರ್ಮಾದಿಗಳೊಳು+ ಅರ್ಧವನು+ ಆರು ಕೊಂಬರು ದ್ವಿಜರು ಹೊರಗಾಗಿ= ಕ್ಷತ್ರಿಯರು ವೈಶ್ಯರು ಮಾಡುವ ದಾನ ಧರ್ಮಾದಿಗಳನ್ನು ಬ್ರಾಹ್ಮಣರಲ್ಲದೆ ಬೇರೆ ಯಾರು ತೆಗೆದುಳ್ಳುತ್ತಾರೆ? ಜಗವ ರಕ್ಷಿಸಲು ಆವು ಕೊಂಬೆವು= ಜಗತ್ತಿನ ಮತ್ತು ದಾನಿಗಳ ಕ್ಷೇಮಕ್ಕಾಗಿ ದಾನವನ್ನು ಪಡೆಯುತ್ತೇವೆ. ಮಗುಳೆ ಕೊಡುವೆವು= ಅದನ್ನು ಪುನಹ ಜಪ ತಪಾದಿಗಳ ಮೂಲಕ ದಾನಿಗಳಿಗೆ ಸುಖ ಸಂಪತ್ತನ್ನು ಹಾರೈಸುವೆವು, ಹಾಗೆ ಹಿಂತಿರುಗಿಸುವೆವು- ಕೊಡುವೆವು. ಕ್ಷತ್ರ ವೈಶ್ಯಾದಿಗಳು ಕೊಡುವರು; ತತ್ ಪ್ರತಿಗ್ರಹ ಯೋಗ್ಯವಲ್ಲೆಂದ= ಅದರೆ ಧಾರ್ಮಿಕ ಕಾರ್ಯದಲ್ಲಿ ಕ್ಷತ್ರಿಯರು ಮತ್ತು ವೈಶ್ಯಾದಿಗಳು ದಾನಗಳನ್ನು ಪಡೆಯಲು ಯೋಗ್ಯರಲ್ಲ, ಎಂದ.