Karnata Bharata Kathamanjari 1.38.17_16
Karṇāṭa Bhārata Kathāmañjarī 1.38.17_16
- Language
- Kannada
1.38.17_16
ಉಳಿದ ವರ್ಣತ್ರಯಕೆ ಬೆಸಕೈವ+ ಅಳತೆಯಲಿ ಶೂದ್ರನು ಕೃತಾರ್ಥನು= ಶೂದ್ರನು ಸೇವೆ ಮಾಡಿ ಕೃತಾರ್ಥನಾಗುತ್ತಾನೆ., ತಿಳಿಯೆ ನೀನಾರು+ ಇದರೊಳಗೆ ಕೊಂಬವನೊ ಕೊಡುವವನೊ? ಕುಲವಿಹೀನನ ತಂದು ಕೌರವ ತಿಲಕ ಪತಿಕರಿಸಿದೊಡೆ- ಅಂಗೀಕರಿಸದರೆ - ಆದರಿಸಿದರೆ, ನಾಲಗೆಯು+ ಉಲಿಯಲಾಯಿತು= ಕೌರವ ಶ್ರೇಷ್ಟನು ಕುಲವಿಹೀನನ್ನು ತಂದು ಅಂಗೀಕರಿಸಿ - ಆದರಿಸಿದರೆ ಅದಕ್ಕೆ ಪ್ರತಿಯಾಗಿ ನಿನ್ನ ನಾಲಗೆಯು ಕುಲವನ್ನು ಉಲಿಯಲಾಯಿತು- ಹೇಳಿತು; ಕರ್ಣ ನಿನ್ನ+ ಅವಭವವ- ಕೆಟ್ಟ ಪಾಪ, ದುಃಖ, ಕಷ್ಟಗಳನ್ನು ನೆನೆ+ ಯ+ ಎಂದ.