Karnata Bharata Kathamanjari 1.38.1_8
Karṇāṭa Bhārata Kathāmañjarī 1.38.1_8
- Language
- Kannada
1.38.1_8
ಸುರಿಸುತಿವೆ ಕಂಬನಿಗಳನು ಗಜ
ತುರಗಚಯವೊರೆಯುಗಿದಡಾಯುಧ
ಮುರಿದು ಬಿದ್ದುದು ಬೀಸುತಿದೆ ಬಿರುಗಾಳಿ ಬಲ ಬೆದರೆ
ಹರಿವುತಿವೆ ತಾರಕಿಗಳಭ್ರದೊ
ಳರುಣಮಯ ಜಲಧಾರೆಯಿದೆ ತರ
ತರದಲಿದೆ ಪಡಿಸೂರ್ಯಮಂಡಲವೆಂದನಾ ದ್ರೋಣ ೨
ಸುರಿಸುತಿವೆ ಕಂಬನಿಗಳನು ಗಜತುರಗಚಯ= ಆನೆ ಕುದುರೆಗಳ ಸಮೂಹ ಕಣ್ನಲ್ಲಿ ನೀರು ಸುರಿಸುತ್ತಿವೆ./ ವೊರೆಯುಗಿದಡೆ+ ಆಯುಧ ಮುರಿದು ಬಿದ್ದುದು= ಒರೆಯಿಂದ ಕತ್ತಿ ತೆಗೆದರೆ ಕತ್ತಿಯೇ ಮುರಿದು ಬಿದ್ದಿತು./ ಬೀಸುತಿದೆ ಬಿರುಗಾಳಿ, ಬಲ ಬೆದರೆ ಹರಿವುತಿವೆ ತಾರಕಿಗಳು+ ಅಭ್ರದೊಳು+= ಬಿರುಗಾಳಿ ಬೀಸುತ್ತಿದೆ. ಸೈನ್ಯ ಹೆದರುವಂತೆನಕ್ಷತ್ರಗಳು/ ಉಲ್ಕೆಗಳು ಆಕಾಶದಲ್ಲಿ ಬೀಳುತ್ತಿದೆ./ ಅರುಣಮಯ ಜಲಧಾರೆಯಿದೆ ತರತರದಲಿದೆ ಪಡಿ- ಸೂರ್ಯಮಂಡಲವು+= ಕೆಂಪು ಬಣ್ಣದ ಜಲಧಾರೆ- ಮಳೆ ಬರುತ್ತಿದೆ; ತರತರದಲಿದೆ ಪಡಿ- ಸೂರ್ಯಮಂಡಲವು ವಿಚಿತ್ರವಾಗಿದೆ. ಎಂದನು+ ಆ ದ್ರೋಣ.