Pramāṇa · Search · About · API

Karnata Bharata Kathamanjari 1.38.40_28

Karṇāṭa Bhārata Kathāmañjarī 1.38.40_28

Language
Kannada

1.38.40_28

ಮುಂದೆ ಕವಿವ+ ಅಂಬುಗಳು ಸುಭಟರ ಕೊಂದು ಬಿದ್ದವು= ಮುಂದೆ ಆವರಿಸಿ ನುಗ್ಗಿದ ಬಾಣಗಳು ಕವರವನ ಸುಭಟರನ್ನು ಕೊಂದು ಬಿದ್ದವು. ಮತ್ತೆ ಬಳಿಯಲಿ ಬಂದ+ ಅವಕೆ ಗುರಿಯಿಲ್ಲ ಹೇಳುವೆನು+ ಏನನು+ ಅದ್ಭುತವ= ಮತ್ತೆ ಅರ್ಜುನನ ಬಳಿಗೆ ಬಂದ ಆ ಮಂತ್ರಾಸ್ತ್ರಗಳಿಗೆ, ಅವಕ್ಕೆ ಪನಃ ಹೊಡೆಯಲು ಗುರಿಯಿಲ್ಲ- ಶತ್ರುಗಳೇ ಇಲ್ಲ. ಹೇಳುವೆನು+ ಏನನು+ ಅದ್ಭುತವ, ಒಂದು ಗುರಿಗೆ+ ಎರಡು+ ಅಂಬ ತೊಡಬೇಡ+ ಎಂದು ಪಾರ್ಥನ ಬೇಡಿಕೊಂಡವು, ಸಂದ ಮಂತ್ರಾಸ್ತ್ರಂಗಳು= ಈ ಅದ್ಭುತದ ಬಗೆಗೆ ಏನನ್ನು ಹೇಳಲಿ! ಒಂದು ಗುರಿಗೆ ಎರಡು ಬಾಣಗಳನ್ನು ತೊಡಬೇಡ, ಗುರಿ ತಪ್ಪಬೇಡ ಎಂದು ಪಾರ್ಥನನ್ನು ಹೊಡೆದ ಮಂತ್ರಾಸ್ತ್ರಂಗಳು ಬೇಡಿಕೊಂಡವು, ಎಲೆ ಜನಮೇಜಯ ಕ್ಷಿತಿಪ.