Karnata Bharata Kathamanjari 1.38.41_31
Karṇāṭa Bhārata Kathāmañjarī 1.38.41_31
- Language
- Kannada
1.38.41_31
ಹಿಕ್ಕು = 1. ಎಳೆದುಕೊಳ್ಳು. 2. ಸೆಳೆದು ಅಪ್ಪಿಕೊಳ್ಳು. 3. ತಲೆಗೂದಲನ್ನು ಹಣಿಗೆಯಿಂದ ಹಿಕ್ಕು,- ಸಿಕ್ಕು ಬಿಡಿಸಿ ಓರಣಗೊಳಿಸು. 4. ದೋಚು. 5. ಒಟ್ಟುಗೂಡು.(ಸಾಹಿತ್ಯ ಪರಿಷತ್ ನಿಘಂಟು)
ಹಿಕ್ಕುದವು ಹಯಬಲದ ಸುಭಟರನು+ ಒಕ್ಕಿ, ತೂರಿದವು+ = ಹಯಬಲದ/ ಕುದುರೆ ಸೈನ್ಯದ ಸುಭಟರನ್ನು ಬಾಚಿ (ತಲೆಕೂದಲಿನಿಂದ ಹೇನನ್ನು ತೆಗೆಯುವಂತೆ ) ಒಟ್ಟುಗೂಡಿಸಿ ತೂರಿ ಓಡಿಸಿದವು. ಆನೆಗಳ ಸಾಲು+ ಇಕ್ಕಿ, ನಟ್ಟವು ಬಹಳ ರಕ್ತದ ಕೆಸರ ಕೈಗಳಲಿ= ಅವನ ಬಾಣಗಳು ಆನೆಗಳನ್ನು ಸಾಲು ಸಾಲಾಗಿ (ಬತ್ತದ ಸಸಿಗಳನ್ನು ಇಕ್ಕಿ ನೆಡುವಂತೆ) ಬಡಿದು ಮಲಗಿಸಿ ರಕ್ತದ ಕೆಸರ ಕೈಗಳಲಿ ನೆಟ್ಟವು. ಮುಕ್ಕಿದವು ಮಲೆತವರ ಮಾಂಸವನು,+= ಎದುರು ನಿಂತವರ ಮಾಂಸವನ್ನು ಹೊಕ್ಕು ತಿಂದವು. ಇಕ್ಕಿದವು ದ್ವಿಜಗಣಕೆ ಛತ್ರವನು,= ಬ್ರಾಹ್ಮಣರಿಗೆ ಶ್ರಾದ್ಧದ ಊಟವನ್ನು ಛತ್ರದಲ್ಲಿ ಹಾಕಿಸಿದವು. + ಇಕ್ಕಿದವು ದಿಗುವಳೆಯದಲಿ- ದಿಕ್+ ವಲಯದಲಿ ರಣಧೀರನ+ ಅಂಬುಗಳು= ಎಲ್ಲಾ ದಿಕ್ಕಿನಲ್ಲಿ ರಣಧೀರ ಅರ್ಜುನನ ಅಂಬುಗಳು/ಬಾಣಗಳು ಇಕ್ಕಿದವು-ನೆಟ್ಟವು.