Karnata Bharata Kathamanjari 1.38.42_32
Karṇāṭa Bhārata Kathāmañjarī 1.38.42_32
- Language
- Kannada
1.38.42_32
ಒಗ್ಗೊಡೆಯದ+ ಔಕಿದ (ಒತ್ತಿದ, ಹಿಸುಕಿದ) ಮಹೀಶರು ಮುಗ್ಗಿದರು= ಒಗ್ಗಟ್ಟಾಗದ ವತ್ತಡಕ್ಕೆ ಸಿಲುಕಿದ ರಾಜರು ಮುಗ್ಗಿದರು- ಸೋತರು; ಮುನ್ನಾಳ ಮೇಳದ ವೊಗ್ಗಿನಲಿ ಮುಂಕೊಂಡು ಬಿರುದರು ಬಿಸುಟರು+ ಒಡಲುಗಳ= ಮುಂದಿನ ಸಾಲಿನ ಸೈನಿಕರು ಜೊತೆಸೇರಿಕೊಂಡು ಒಟ್ಟಾಗಿ ಮುಂದೆ ನಿಂತುಕೊಂಡು ಹೋರಾಡಿದ ಬಿರುದುಳ್ಳ ಶೂರರು, ಬಿಸುಟರು+ ಒಡಲುಗಳ- ಅರ್ಜುನನ ಬಾಣಕ್ಕೆ ದೇಹವನ್ನು ಬಿಟ್ಟು ಸ್ವರ್ಗಕ್ಕೆ ಹೋದರು, ಮರಣ ಹೊಂದಿದರು. ನುಗ್ಗುನುಸಿಯಾಯ್ತು+ ಅತಿರಥರು ಗಜ ಮೊಗ್ಗರದ (ಗುಂಪು- ದಳ) ಮೊನೆ ಮುರಿದು ಕಾಲನ ಸಗ್ಗಳೆಯ ಸೆಳೆದಂತೆ ಸುರಿದವು ರಕ್ತ ಧಾರೆಗಳು= ಅತಿರಥರು ಮತ್ತು ಗಜ ಸೈನ್ಯದ ದಳದ ಎದುರು ಸಾಲು ಮುರಿದುಬಿದ್ದು ನುಗ್ಗುನುಸಿಯಾಯಿತು, ನಿರ್ನಾಮವಾಯಿತು. ಕಾಲನ- ಯಮನ ಸಗ್ಗಳೆಯ ಸೆಳೆದಂತೆ= ಕಾಲನ ರಕ್ತ ತುಂಬಿದ ಚರ್ಮದ ಚೀಲ ಹರಿದಹಾಗೆ ರಕ್ತ ಧಾರೆಗಳು ಸುರಿದವು.
ಸಗ್ಗಳೆ= 1. ನೀರುತುಂಬುವ ಚರ್ಮದ ಚೀಲ. (ಸಾ.ಪ.ನಿ.)