Pramāṇa · Search · About · API

Karnata Bharata Kathamanjari 1.38.46_34

Karṇāṭa Bhārata Kathāmañjarī 1.38.46_34

Language
Kannada

1.38.46_34

ಏರುವಡೆದರು (ಆಯಾಸದಿಂದ - ಉಬ್ಬಸದಿಂದ ಏದುಸಿರು ಬಿಟ್ಟರು) ಕೆಲರು, ಕೆಲರ+ಅಸು ಸೂರೆಯೋದದು= ಯುದ್ಧದಲ್ಲಿ ಕೌರವಬ ಸೇನೆಯ ಕೆಲವರು ಏದುಸಿರು ಪಡೆದರು, ಕೆಲವರ ಪ್ರಾಣವೇ ಹೊರಟುಹೋಯಿತು.// ಮತ್ತೆ ಕೆಲರ+ ಎದೆ ಡೋರುಗಳ ಪೂರಾಯ ಗಾಯದಲಿ+ ಉಸುರ ತೆಗೆ ಬಗೆಯ ಕಾರಿದರು ರಕ್ತವನು= ಎದೆಯಗೂಡಿನ ಆಳವಾದ ಗಾಯದಲ್ಲಿ, ಉಸಿರು ಬಿಟ್ಟರೆ ಅದರಲ್ಲಿ ರಕ್ತವನ್ನೇ ಕಾರಿದರು.// ಸಗ್ಗಕೆ ಗೂರು ಮಾರಾಡಿದರು ತಲೆಗಳ ಹೇರಿದರು ಹರಣವನುವೊಟ್ಟಿಗೆ ಕಾಲನ+ ಅರಮನೆಗೆ= ಕೆಲವರು ಹೆದರಿ ಉಬ್ಬಸ ಹೆಚ್ಚಿ ತಲೆಗಳ ಮಾಲೆಮಾಡಿದರು, ಅವರ ಪ್ರಾಣಗಳನ್ನು ಒಟ್ಟು ಸೇರಿಸಿ ಯಮನ ಅರಮನೆಗೆ ಹೇರಿ ಕಳಿಸದರು.