Pramāṇa · Search · About · API

Karnata Bharata Kathamanjari 1.48.11_13

Karṇāṭa Bhārata Kathāmañjarī 1.48.11_13

Language
Kannada

1.48.11_13

ಅದೆ ಸುಯೋಧನನೊಡ್ಡು ನಸುದೂ
ರದಲಿ ಕವಿಕವಿಯೆನುತ ಧಾಳಿ
ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ
ಹೊದರು ಹಳಚಿತು ಭಟರು ಭುಜಗ
ರ್ವದಲಿ ಗರುವರ ಗಾಢ ಶೌರ್ಯದ
ಮದಕೆ ಮಡುಮುರಿಯಾಯ್ತು ಸಿಲುಕಿತು ಮೌನ ಮೋನದಲಿ ೧೨
ಹಳಚು:ಹಳಚಿತು.= 1. ತಾಗು. 2. ಆಕ್ರಮಿಸು. 3. ವ್ಯಾಪಿಸು;; ಹೊದರು= ಮುಳ್ಳುಗಳಿರುವ ಪೊದೆ; ಗರುವರ= ಗರ್ವಿತರ, ಗೌರವವುಳ್ಳವರ,
ಹೊದರು ಹಳಚಿತು: ಅಥವಾ- ಪೊದೆಯ ಮರೆ ಕಳಚಿ ಕೌರವ ಸಿಕ್ಕಿದನು.??