Karnata Bharata Kathamanjari 1.9: ಸಟೀಕಾ (ಪರ್ವ-೧::ಸಂಧಿ-೮)
Karṇāṭa Bhārata Kathāmañjarī 1.9
- Language
- Kannada
ಸಟೀಕಾ (ಪರ್ವ-೧::ಸಂಧಿ-೮)
1.9.p1
<ಕುಮಾರವ್ಯಾಸಭಾರತ-ಸಟೀಕಾ
1.9.p2
ಕುಮಾರವ್ಯಾಸ ಭಾರತ/ಸಟೀಕಾ (೧.-ಆದಿಪರ್ವ::ಸಂಧಿ-೮)
1.9.p3
ಸೂಚನೆ:
1.9.p4
ವಾಯುಸುತನುರಿಮನೆಯ ಕೌರವ
ರಾಯ ಕೃತಕವ ಕಳೆದು ಹೊಕ್ಕನು
ತಾಯಿ ವೊಡಹುಟ್ಟಿದರು ಸಹಿತ ಮಹಾ ವನಾಂತರವ||ಸೂ.||
~~ಓಂ~~
1.9.p5
♠♠♠
1.9.p6
ಹಸ್ತಿನಾವತಿಯಲ್ಲಿ ಕೌರವ ಪಾಂಡವರ ಜಗಳ
1.9.p7
ಕೇಳು ಜನಮೇಜಯ ಧರಿತ್ರೀ
ಪಾಲ ಗಜನಗರಿಯಲಿ ಕೌರವ
ರಾಳ ಪಾಂಡವರಾಳ ಸೆಣಸಿನ ಕಾಲು ಮೆಟ್ಟುಗಳ ||
ಸೂಳು ಮತ್ಸರ ಬಿರುದು ಪಾಡಿನ
ಚೂಳಿಗಲಹದ ಕದಡು ಜೂಜಿನ
ತೋಳುವಲರೊಳತೋಟಿ ಮಸಗಿತು ದಿವಸ ದಿವಸದಲಿ || (೧)
1.9.p8
ಬೀದಿಗಲಹದ ಕದಡು ಬೀಡಿನ
ಲೈದೆ ಹಬ್ಬಿತು ಬೀಡುಗಲಹದ
ಕೈದೊಳಸು ಕೊಂಡೆಸಗಿ ನಟಿಸಿತು ನಾಡು ನಾಡಿನಲಿ ||
ಅದುದೆರಡರಸಿಭಪುರಿಗೆ ಕಾ
ಳಾದುದಿನ್ನೇನೆಂದು ಪುರಜನ
ವೈದೆ ಹೆದರಿತು ಭೀಮ ದುರ್ಯೋಧನರ ಹೋರಟೆಗೆ || (೨) ||
1.9.p9
ಬೇರೆ ಪಾಂಡುವರಿರಲಿ ರಾಯನ
ನೂರು ಮಕ್ಕಳು ಪುರವನಾಳಲಿ
ಬೇರೆ ಕೌರವರಿರಲಿ ಪಾಂಡವರಾಳಲಿಭ ಪುರಿಯ ||
ನೂರರೊಡನೈವರನು ಧರಿಸಿರ
ಲಾರದೀ ಪುರಿಯೆನುತ ದುಗುಡವ
ಹೇರಿ ಹೊದಕುಳಿಗೊಳುತಲಿರ್ದುದು ಹಸ್ತಿನಾನಗರ || (೩) ||
1.9.p10
ದುರ್ಯೋಧನನ ಚಿಂತೆ, ಕರ್ಣನ ಯುದ್ಧೋತ್ಸಾಹ
1.9.p11
ಒಂದು ದಿವಸ ಸುಯೋಧನನು ನಿಜ
ಮಂದಿರದೊಳೇಕಾಂತದಲಿ ಮನ
ನೊಂದು ನುಡಿದನು ಶಕುನಿ ಕರ್ಣ ಜಯದ್ರಥಾದ್ಯರಿಗೆ ||
ಅಂದು ಭೀಮಾರ್ಜುನರು ದ್ರುಪದನ
ತಂದು ದಕ್ಷಿಣೆಯಿತ್ತು ಗುರುವಿಗೆ
ಸಂದರೈ ಸಮರದಲಿ ಪರಿಭವವಾಯ್ತು ತಮಗೆಂದ || (೪) ||
1.9.p12
ವನಜ ವನದಲಿ ತುರುಚೆ ಕಬ್ಬಿನ
ಬನದಿ ಕದಸಿಗೆ ಚೂತಮಯ ಕಾ
ನನದಿ ಬೊಬ್ಬುಲಿ ಭೀಮಸೇನನಯಿರವು ತಮ್ಮೊಳಗೆ ||
ಇನಿತು ಪಾರ್ಥನ ಮೇಲೆ ಯಮಳರ
ಜಿನುಗಿನಲಿ ಜಾರೆನು ಯುಧಿಷ್ಠಿರ
ಜನಪನಾಗಲಿ ಮೇಣು ಮಾಣಲಿ ಭೀತಿಯಿಲ್ಲೆಂದ || (೫) ||
1.9.p13
ಹುದು ನಡೆಯದಿವರೊಡನೆ ನಮ್ಮಲಿ
ಕದನವೇ ಕೈಗಟ್ಟುವುದು ಕಾ
ದಿದೊಡೆ ಹೆಬ್ಬಲವಹುದು ದುರ್ಬಲ ದೈವಗತಿ ಬೇರೆ ||
ನದಿಗಳರಳೆಯ ಹಾಸು ನವ ವಿಷ
ವುದರ ದೀಪನ ಚೂರ್ಣವಾವಂ
ಗದಲಿ ಸಾಪತ್ನರಲಿ ಸದರವ ಕಾಣೆ ತಾನೆಂದ || (೬) ||
1.9.p14
ದುಗುಡವೇತಕೆ ಜೀಯ ಡೊಂಬಿನ
ಜಗಳವನು ತೆಗೆದರಿನೃಪರ ಸುಂ
ಟಗೆಯನಾಯ್ಸುವೆನವರ ತನುವನು ಯುದ್ಧ ರಂಗದಲಿ ||
ದಿಗು ಬಲಿಯ ಕೊಡಿಸುವೆನು ಸಾಕಿ
ನ್ನೊಗುಮಿಗೆಯ ಚಿಂತಾಂಗನೆಯನೋ
ಲಗಿಸದಿರು ಕುರುರಾಯ ಚಿತ್ತೈಸೆಂದನಾ ಕರ್ಣ || (೭) ||
1.9.p15
ಹೊಡೆದು ಹೊಡೆ ಚೆಂಡಾಡಿ ರಿಪುಗಳ
ಗಡಣವನು ಯಮರಾಜಧಾನಿಗೆ
ನಡೆಸುವೆನು ನೀ ನೋಡುತಿರು ಸಾಕೊಂದು ನಿಮಿಷದಲಿ ||
ಕೊಡು ತನೆಗೆ ನೇಮವನು ದುಗುಡವ
ಬಿಡು ಮನಸ್ಸಿನ ಕಂದು ಕುಂದನು
ಹಿಡಿಯದಿರು ಕುರುರಾಯ ಚಿತ್ತೈಸೆಂದನಾ ಕರ್ಣ || (೮) ||
1.9.p16
ಹಬ್ಬುಗೆಯ ಹದಿನಾಲ್ಕು ಲೋಕದ
ಮೊಬ್ಬುಗಳನೀಡಾಡಿನಭದೊಳ
ಗೊಬ್ಬನೇ ರವಿ ತೊಳಗಿ ಬೆಳಗುವವೋಲು ಪಾಂಡವರ |
ಕೊಬ್ಬುಗಳ ನಿಲುಸುವೆನು ಧರೆಯೊಳ
ಗೊಬ್ಬನೇ ದುರ್ಯೋಧನನು ಮ
ತ್ತೊಬ್ಬರಿಲ್ಲೆಂದೆನಿಸಿ ತೋರುವೆನೆಂದನಾ ಕರ್ಣ || (೯)
1.9.p17
ವಿದುರ ಭೀಷ್ಮಾದಿಗಳು ನಿನ್ನಯ
ಸದನದೊಳಗುಂಡುಟ್ಟು ಪರರ
ಭ್ಯುದಯೆವನೆ ಬಯಸುವರು ದೂರುವರೆಮ್ಮನವರುಗಳ ||
ಹದನ ನೀನೇ ಬಲ್ಲೆ ಸಾಕಿ
ನ್ನದರ ಮಾತೇಕೆಂದ ತನ್ನಯ
ಕದನವನು ಚಿತ್ತೈಸು ಸಾಕಿನ್ನೆಂದನಾ ಕರ್ಣ || (೧೦) ||
1.9.p18
ಸಹಜವೀ ನುಡಿ ಕರ್ಣನಾಡಿದ
ನಹುದು ಪಾಂಡವರೆಂಬವರು ಕಡು
ಸಹಸಿಗಳು ಗೆಲಲರಿದು ಕುಹಕೋಪಾಯ ಮಾರ್ಗದಲಿ |
ಅಹಿತರನು ಗೆಲಬಹುದು ಪರಿಕರ
ಸಹಿತವರುಗಳ ನಿಮ್ಮ ಚಿತ್ತಕೆ
ಬಹರೆ ತನ್ನಭಿಮತವನವಧರಿಸೆಂದನಾ ಶಕುನಿ || (೧೧)
1.9.p19
ಕೌರವನಿಗೆ ಶಕುನಿಯ ನೀತಿ
1.9.p20
ಐದು ಮುಖವೀರೈದುಭುಜ ಹದಿ
ನೈದು ಕಂಗಳ ವಿಗಡ ರುದ್ರನು
ಮೇದಿನಿಯ ಮೇಲೊಂದು ಶಿರ ಭುಜವೆರಡನಳವಡಿಸಿ |
ಆದಿಪುರುಷನು ಭೀಮ ಪೆಸರಿನ
ಲೈದೆ ಜನಿಸಿದನಾತನಿದಿರಲಿ
ಕೈದುಕಾರನದಾವನೈ ಹೇಳೆಂದನಾ ಶಕುನಿ || (೧೨)
1.9.p21
ಅರಸ ಕೇಳ್ಬಿಲು ವಿದ್ಯದಲಿ ಮೂ
ವರು ಕಣಾ ಸಾಮರ್ಥ್ಯ ಪುರುಷರು
ಧರೆಯೊಳೊಬ್ಬರಿಗೊಂದು ಗುಣ ಪಾರ್ಥಂಗೆ ಮೂರು ಗುಣ |
ಭರಿತವಾಗಿಹುದಾತನೊಬ್ಬನ
ಸರಿಸದಲಿ ಮಾರಾಂತು ಜೀವಿಸಿ
ಮರಳ ಬಲ್ಲವನಾವನೈ ಹೇಳೆಂದನಾ ಶಕುನಿ || (೧೩)
1.9.p22
ರಾಮಚಂದ್ರನ ಚರಣಯುಗ ನಿ
ಸ್ಸೀಮ ಭೀಷ್ಮಾಚಾರಿಯರ ಶಿರ
ವಾ ಮಹಾರಥ ದ್ರೋಣನೆದೆ ನಡುಗುವುದು ಸಮರದಲಿ ||
ಸೌಮನಸ್ಯನು ನಿಷ್ಪ್ರಕಂಪ ಸ
ನಾಮನರ್ಜುನ ದೇವನಿದಿರಲಿ
ಭೂಮಿಯಲಿ ಬಿಲ್ಲಾಳದಾವವನೆಂದನಾ ಶಕುನಿ || (೧೪) ||
1.9.p23
ಶತ್ರುಗಳ ಸಂಹರಿಸಿ ರಾಜ್ಯವ
ನೊತ್ತಿಯಾಳುವೆನೆಂಬ ಸಾಹಸ
ಸತ್ವಗುಣ ನಿನಗಿಲ್ಲ ಪಾಂಡವರತುಲ ಭುಜಬಲರು ||
ಕೃತ್ರಿಮದ ಮುಖದಿಂದ ರಿಪುಗಳ
ಕಿತ್ತು ಹಾಯಿಕಿ ನೆಲನನೇಕ
ಚ್ಛತ್ರದಲಿ ಸಲಹುವುದು ಮತ ಕೇಳೆಂದನಾ ಶಕುನಿ || (೧೫) ||
1.9.p24
ಸೋದರರುಗಳು ನೀವು ನಿಮ್ಮೊಳು
ಭೇದ ಮಂತ್ರವ ಮಾಡುವುದು ಮ
ರ್ಯಾದೆಯೇ ನಾವ್ ನಿಮ್ಮಡಿಯಲರಮನೆಯ ಸೇವಕರು ||
ವಾದಿಸುವರಿತ್ತಂಡ ಸರಿ ನಮ
ಗಾದರೆಯು ಕಂಡುದ ನುಡಿಯ ಬೇ
ಕಾದರಿಸು ಮೇಣ್ ಮಾನು ಬಿನ್ನಹವೆಂದನಾ ಶಕುನಿ || (೧೬) ||
1.9.p25
ಪಕ್ಷವರಡೇ ಲೋಕದೊಳ್ ಪಿತೃ
ಪಕ್ಷ ಮೇಣಾ ಮಾತೃಪಕ್ಷ ವಿ
ಪಕ್ಷ ತಂದೆಯ ದೆಸೆ ಸಪಕ್ಷವು ತಾಯ ದೆಸೆಯವರು |
ತಕ್ಷಕನ ತೆರನಂತೆ ನಿಮ್ಮನು
ಭಕ್ಷಿಸುವರಾವಂಗದಲಿ ನೀ
ನೀಕ್ಷಿಸುವುದೈ ಪಾಂಡು ಪುತ್ರರನೆಂದನಾ ಶಕುನಿ || (೧೭)
1.9.p26
ಮೊಳೆಯಲೇ ಮುರುಡಿಸಲು ಬೇಹುದು
ಬಲಿದ ಬಳಿಕದು ನಿನ್ನ ಹವಣೀ
ಇಳೆಯೊಳಧರ್ವನಿತ್ತು ರಿಪುಗಳ ಹೆಚ್ಚಿಸಿದ ಬಳಿಕ ||
ಗೆಲುವನಾವನು ದೇವ ದಾನವ
ರೊಳಗೆ ಭೀಮಾರ್ಜುನರ ಕೈ ಮನ
ದಳವನರಿಯಾ ಭಾರವೈ ಮೇಲೆಂದನಾ ಶಕುನಿ || (೧೮) ||
ಮುರುಟು =1. ಹೋಗು. 2. ಹರಿ. 3. ಹೆದರು. 4. ಮುರುಟು. 5. ಇಲ್ಲವಾಗು. 6. ತೆಗೆ.= ಮುರುಟಿಸು, ಮುರುಡಿಸು- ಮುರುಡಿಸಲು
1.9.p27
ಧಾರುಣಿಯೊಳು ಪಿಪೀಲಿಕೆಯು ವಿ
ಸ್ತಾರದಲಿ ಮಾಡಿದ ಮನೆಯ ಕಾ
ಳೋರಗನು ಹೋಗುವಂತೆ ರಿಪು ಕುಂತೀಕುಮಾರಕರು ||
ವೈರದಲಿ ಸಪ್ತಾಂಗವನು ಕೈ
ಸೂರೆಗೊಂಬರು ತಪ್ಪದಿದಕೆ ವಿ
ಚಾರವನು ಕಾಲದಲಿ ಮಾಡುವುದೆಂದನಾ ಶಕುನಿ || (೧೯) ||
ಸಪ್ತಾಂಗ:ರಾಜ್ಯಾಂಗ ಸಪ್ತಕ:- ೧.ಸ್ವಾಮಿ, ೨. ಅಮಾತ್ಯ, ೩.ಸುಹೃತ್, ೪.ಕೋಶ, ೫.ರಾಷ್ಟ್ರ,, ೬.ದುರ್ಗ, ೭.ಬಲ.- ಅಥವಾ-ಸ್ವಾಮಿ, ಅಮಾತ್ಯ, ಜನಪದ, ದುರ್ಗ, ಕೋಶ, ಸೈನ್ಯ ಮತ್ತು ಮಿತ್ರ ಎಂಬ ರಾಜ್ಯಾಡಳಿತದ ಏಳು ಅಂಗಗಳು.
1.9.p28
ಹಿಂದೆ ನೀನವರುಗಳ ನಾನಾ
ಚಂದದಲಿ ನೋಯಿಸಿದೆ ಮನದಲಿ
ಕಂದು ಕುಂದದು ಕಷ್ಟ ವೃತ್ತಿಯನಾಚರಿಸುತಿಹರು |
ಇಂದು ನೀನಾ ಪಾಂಡುಪುತ್ರರ
ನಂದಗೆಡಿಸದೆ ಬಿಟ್ಟೆಯಾದೊಡೆ
ಮುಂದೆ ಬೆಟ್ಟಿತು ರಾಜಕಾರಿಯವೆಂದನಾ ಶಕುನಿ || (೨೦)
1.9.p29
ಇರುಬಿನಲಿ ಸಿಕ್ಕಿರ್ದ ಹುಲಿಯನು
ಮುರಿದು ಕಳೆಯದೆ ತಳಪಟಕೆ ಬಿ
ಟ್ಟಿರಿಯ ಬಹುದೇ ಕೊಂದು ಕೂಗದೆ ಬಿಡುವುದೇ ಬಳಿಕ |
ಕರುಬರಹ ಪಾಂಡವರಿಗೀಗಲೆ
ಹರುವ ನೆನೆ ಹೊರಬಿದ್ದರಾದೊಡೆ
ತರಿದು ಬಿಸುಡದೆ ಮಾಣ್ವರೇ ಹೇಳೆಂದನಾ ಶಕುನಿ || (೨೧)
1.9.p30
ಹರಿಹಯನು ವೃತ್ರಾಸುರನ ಸಂ
ಹರಿಸಲರಿಯದೆ ಗರುವದಿಂದಿರು
ತಿರಲವನು ದಿನದಿನದೊಳಣುವಣು ಮಾತ್ರವನು ಬೆಳೆದು ||
ಧರೆಯ ತುಂಬಲು ತನ್ನ ಸತ್ವದ
ನೆರವಣಿಗೆಗೈದಿಸದೆ ನಾನಾ
ತೆರದೊಳಾಯಸಗೊಳ್ಳನೇ ಹೇಳೆಂದನಾ ಶಕುನಿ || (೨೨) ||
1.9.p31
ಅಡವಿಯಲಿ ಜನಿಸಿದರು ಬೆಳವಿಗೆ
ಯಡವಿಯೊಳಗಿನ್ನವರ ಬಾಳಿಕೆ
ಗಡವಿಯೇ ನೆಲಮನೆಯದಲ್ಲದೆ ಪಾಂಡು ಪುತ್ರರಿಗೆ |
ಪೊಡವಿಯೊಡೆತನ ಸಲ್ಲದವರನು
ನಡೆಸುವುದು ಕಾಲದಲಿ ರಾಜ್ಯವ
ಕೊಡುವುದಾವಂಗದಲಿ ಮತವಲ್ಲೆಂದನಾ ಶಕುನಿ || (೨೩)
1.9.p32
ತಿಮಿರವಡಗಿದ ಲೋಕ ಶಿಕ್ಷಾ
ಕ್ರಮಣವಡಗಿದ ದಂತಿ ಕರ್ಮ
ಭ್ರಮೆಗಳಡಗಿದ ಯೋಗಿ ರುಜೆಯಡಗಿದ ನರೋತ್ತಮನು ||
ಹಿಮವಡಗಿದ ಸರೋಜದಂತಿಹು
ದಮಲ ಮತ ಕೇಳ್ವಗೆಗಳಡಗಿದ
ಡಮರ ಪದವೆನಿಸುವುದು ಚಿತ್ತೈ ಸೆಂದನಾ ಶಕುನಿ || (೨೪) ||
1.9.p33
ಬಿಡದೆ ಸುಖ ದುಃಖಗಳೊಳೊಂದನು
ಹಿಡಿದು ಸದ್ವ್ಯವಹಾರ ಮುಖದಲಿ
ನಡೆಯಲೊಂದರ ತುಷ್ಟಿಯೊಂದರ ನಷ್ಟ ತನಗಹುದು |
ಹಿಡಿವುದಿಹಪರವೆರಡರೊಳಗಳ
ವಡಿಕೆ ತನಗಹುದೊಂದನೊಂದನು
ಬಿಡುವುದಲ್ಲದೆ ಬೇರೆ ಮತವಿಲ್ಲೆಂದನಾ ಶಕುನಿ || (೨೫)
ಇಹ- ದುರ್ಯೋಧನನಿಗೆಹಿತವಾದುದು- ಶತ್ರುವಿಲ್ಲದರಾಜ್ಯ, ಪರ- ಮರಣಾನಂತರ ಸ್ವರ್ಗಲೋಕ ವಾಸ, ಈ ಎರಡದನ್ನೂ ಸಾಧಿಸುವ ಮಾರ್ಗ ಇಲ್ಲದೆಹೋದಾಗ, ಒಂದನ್ನು ಬಿಡಬೇಕಾಗುವುದು. ತನಗೆ ಯಾವುದರಿಂದ ಒಳಿತಾಗುವದೋ ಆ ಒಂದನ್ನು ಅಳವಡಿಸಿಕೊಳ್ಳಬೇಕು ಅಥವಾ ಅನುಸರಿಸಬೇಕು. ಆಗ ಮತ್ತೊಂದನ್ನು ಬಿಡುವುದು. ಅಲ್ಲದೆ ಬೇರೆ ಮಾರ್ಗವಿಲ್ಲ ಎಂದನು, ಆ ಶಕುನಿ. ಇಹಸುಖ-ಪಾಂಡವರನ್ನು ಮೋಸದಿಂದ ಇಲ್ಲವಾಗಿಸಿದರೆ ಇಹಲೋಕದಲ್ಲಿ ರಾಜನಾಗಿ ಸುಖ ಪಡಬಹುದು. ಪರಲೋಕದ ಸುಖ: ಅದು- ಪಾಂಡವರನ್ನು ಹತ್ಯೆಮಾಡಿದರೆ, ಅಧರ್ಮವಾದರೆ ಪರಲೋಕದಲ್ಲಿ ಸ್ವರ್ಗವಿಲ್ಲ. ಅದಲ್ಲದೆ ದಯೆ,ಧರ್ಮದಿಂದ ನೆಡೆದು ಸತ್ತನಂತರ ಸ್ವರ್ಗಪಡೆಯುವ ಆಸೆ ಇದ್ದರೆ, ಪಾಂಡವರನ್ನು ಬದುಕಲು ಬಿಟ್ಟು, ಪಾಂಡವರೊಡನೆ ರಾಜ್ಯ ಹಂಚಿಕೊಂಡರೆ ಅವರು ಪ್ರಬಲರಾಗಿ ಅವರ ಏಳಿಗೆಯನ್ನು ನೋಡುತ್ತಾ ದುಃಖಪಡಬೇಕಾಗುವುದು.
1.9.p34
ಭಾವ ಮೈದುನನಣ್ಣ ತಮ್ಮನು
ಮಾವನಳಿಯನು ಪುತ್ರ ಮಿತ್ರರು
ಸೇವಕರು ಸಜ್ಜನರು ಸುಜನರು ಸತ್ಯಯುತರೆಂದು |
ಭಾವಿಸದಿರಾರುವನು ನಿನ್ನಯ
ಜೀವವುಳ್ಳನ್ನೆಬರ ನಿನ್ನಯ
ದೈವಗತಿಯೆಂದು ನಂಬಿಹುದೆಂದನಾ ಶಕುನಿ || (೨೬)
1.9.p35
ಶತ್ರುಶೇಷವಿದಲ್ಪವೆಂದಳು
ಹುತ್ತ ಬರಲಾಗದು ಕಣಾ ಭೂ
ಪೋತ್ತಮರುಗಳು ವೈರಿ ರಾಯರ ವಂಶ ಬೀಜವನು |
ಬಿತ್ತುವರೆ ನೇತ್ರಾವಳಿಯ ಮೀ
ಟೆತ್ತಿ ಕಾರಾಗಾರದೊಳಗೆ ಕ
ಳತ್ರ ಸಹಿತನಶನದಲಧಿಕ ವ್ರತವ ಮಾಡೆಂದ || (೨೭) ||
1.9.p36
ವಿಷವನಣುವೆಂದಳುಕದುಪಭೋ
ಗಿಸಲು ಕೊಲ್ಲದೆ ಬಿಡುವುದೇ ಕರ
ಗಸದ ನಡು ಬಡವಾದರೆಯು ಕುಯ್ದಿಕ್ಕದೇ ತರುವ ||
ಶಿಶುವಿವನು ಸಾಮರ್ಥ್ಯಪುರುಷನೆ
ಪುಸಿ ಕಣಾಯೆಂದುಳುಹಿದೊಡೆ ರ
ಕ್ಕಸನಹನು ಮುಂದಕ್ಕೆ ತನಗವನೆಂದನು ಶಕುನಿ || (೨೮) ||
1.9.p37
ಕಾಲವನು ಗೂಗೆಗಳು ನಿರ್ಜರ
ರೇಳಿಗೆಯನಾ ದೈತ್ಯರುಗಳು ತ
ಮಾಳಿ ರವಿರಶ್ಮಿಗಳನಾ ಬಲು ನಿದ್ರೆಯನು ಚೋರ ||
ಕಾಲ ಭುಜಗನು ಗರುಡನುಳಿವನು
ತಾಳದಂದದಿ ಪಾಂಡವರು ನಿ
ನ್ನೇಳಿಗೆಯ ಸೈರಿಸರು ಚಿತ್ತೈಸೆಂದನಾ ಶಕುನಿ || (೨೯) ||
1.9.p38
ವಿಗಡ ರುದ್ರನು ಲೋಚನಾಗ್ನಿಯೊ
ಳೊಗುಮಿಗೆಯ ಕೋಪದಲಿ ಕಾಮನ
ಮಿಗೆ ದಹಿಸಿದಂದದಲಿ ರಿಪು ಕುಂತೀಕುಮಾರಕರ ||
ಹೊಗೆದು ಕಳೆ ಲಾಕ್ಷಾಭವನದಲಿ
ಹಗೆಗೆ ಹರಿವಹುದಲ್ಲದಿರ್ದೊಡೆ
ವಿಗಡಿಸುವುದೈ ರಾಜಕಾರ್ಯವಿದೆಂದನಾ ಶಕುನಿ || (೩೦) ||
1.9.p39
ಹಿಡಿವ ಫಣಿಯನು ಹೊಡೆವ ಸಿಡಿಲನು
ಜಡಿವ ಮಾರಿಯ ನಲಿವ ರುಜೆಯನು
ಮಡಿವ ದಿನವನು ಹಾನಿವೃದ್ಧಿಯ ಹೆಚ್ಚು ಕುಂದುಗಳ |
ಕಡಿವ ಹಗೆಯನು ಕಾಲಕರ್ಮದ
ಗಡಣವನು ಸುಖದುಃಖದುದಯದ
ಕಡೆ ಮೊದಲ ಕಾಣಿಸುವನಾವವನೆಂದನಾ ಶಕುನಿ || (೩೧)
1.9.p40
ಇನಿತು ಚಿಂತಿಸಲೇಕೆ ಕೌರವ
ಜನಪ ನಿಮ್ಮಡಿಗಳಿಗೆ ತಾನೊಂ
ದನುವ ಬಿನ್ನಹ ಮಾಡುವೆನು ಪಾಂಡವರ ನೆಳಲಿರಲು ||
ನಿನಗೆ ರಾಜ್ಯವನಾಳ್ವ ಫಲ ಸಂ
ಜನಿಸಲರಿಯದು ಕಾಲದಲಿ ನೀ
ನೆನೆ ಉಪಾಯವನೊಂದನೆಂದು ಕಳಿಂಗ ಕೈ ಮುಗಿದ || (೩೨) ||
1.9.p41
ದೇವ ದಾನವರಂತೆ ಹದ್ದಿನ
ಹಾವಿನೋಲತಿ ವೈರ ಬಂಧದ
ಠಾವು ಠವಣಿಯ ನೀರು ಭೇದಿಸುವಂತೆ ಭೇದಿಸುತ ||
ಕಾವರ ಕಾವುತ್ತ ಕಂಟಕ
ಜೀವಿಗಳನಪಹರಿಸುತಂತ
ರ್ಭಾವಶುದ್ಧಿಯೊಳಿಳೆಯನಾಳುವುದೆಂದನಾ ಶಕುನಿ || (೩೩) ||
1.9.p42
ಮೃತ್ಯುವಿನ ತಾಳಿಗೆಯೊಳಗ್ಗದ
ಶತ್ರುಗಳ ಸಾಮೀಪ್ಯದಲಿ ದು
ರ್ವೃತ್ತರೋಲಗದೊಳಗೆ ಸಿಂಹದ ಗುಹೆಯೊಳಹಿಪತಿಯ ||
ಹುತ್ತಿನೊಳಗಿಹವೋಲು ಸಲೆ ಬಾ
ಳುತ್ತ ಲಂತಃಪುರದೊಳರಸಿರ
ಲತ್ಯಧಿಕವೆಚ್ಚರಿಕೆಯಿರ ಬೇಕೆಂದನಾ ಶಕುನಿ || (೩೪) ||
ಮೃತ್ಯುವಿನ ತಾಳಿಗೆಯೊಳು= ದವಡೆಯಲ್ಲಿ, ಅಗ್ಗದ= ಉತ್ತಮ- ಬಲಿಷ್ಠ ಶತ್ರುಗಳ ಸಾಮೀಪ್ಯದಲಿ, ದುರ್ವೃತ್ತರ= ದುರಾಚಾರಿಗಳ, ಓಲಗದೊಳಗೆ= ಸಭೆಯಲ್ಲಿ,- ಈ ಪ್ರದೇಶಗಳಲ್ಲಿ ಸಿಂಹದ ಗುಹೆಯೊಳು= ಗುಹೆಯಲ್ಲಿ ಮತ್ತು ಅಹಿಪತಿಯ= ಸರ್ಪರಾಜನ ಹುತ್ತದಲ್ಲಿ + ಇಹವೋಲು= ಇರುವಂತೆ, ಸಲೆ=ಚೆನ್ನಾಗಿ, ಬಾಳುತ್ತಲಿ+ ಅಂತಃಪುರದೊಳು+ ಅರಸಿರಲು= ಅರಸಿಯೊಡನೆ ಇದ್ದಾಗಲೂ, ಅತ್ಯಧಿಕವು+ ಎಚ್ಚರಿಕೆಯಿರ= ಎಚ್ಚರಿಕೆಯಿಂದ ಇರ ಬೇಕೆಂದನು, ಆ ಶಕುನಿ
1.9.p43
ಹಗೆಯ ಹೆಂಗಳನರಮನೆಗಳೊಳು
ಪೊಗಿಸಲಾಗದು ತನಗವರು ಹೇ
ಳಿಗೆಯ ಹಾವಿನವೋಲು ಸುಖತರವಲ್ಲವರಿ ನೃಪರ ||
ಮಗಳ ಮಕ್ಕಳ ದೆಸೆಯವರನೋ
ಲಗಿಸುವರ ಬಾಹತ್ತರ ನಿಯೋ
ಗಿಗಳ ನಂಬುವುದುಚಿತವೇ ಹೇಳೆಂದನಾ ಶಕುನಿ || (೩೫) ||
1.9.p44
ದೈವ ಹೊಡೆದಂದದಲಿ ಬೆರತು ಸ
ಭಾ ವಲಯದಲಿ ಗರ್ವ ವಿಭ್ರಮ
ಭಾವ ಭೂಷಿತನಾಗಿ ವೈಹಾಯಸವನೀಕ್ಷಿಸುತ ||
ಹಾವಿನಂದದೊಳಿರದೆ ಹಾಸ್ಯ ರ
ಸಾವಲಂಬನಾಗದೆಯು ಸುಖ
ಜೀವಿಯಾಗಿಹುದುತ್ತಮವು ಕೇಳೆಂದನಾ ಶಕುನಿ || (೩೬) ||
1.9.p45
ಹೀನಮುಖ ಬಹುಮುಖ ಪರಾಙ್ಮುಖ
ದೀನಮುಖ ವಾಚಾಲಮುಖವ
ಜ್ಞಾನಮುಖವಂತರ್ಮುಖ ಬಹಿರ್ಮುಖದ ಕಾರ್ಯದಲಿ |
ಆ ನರೇಂದ್ರನ ವರ್ತನಕೆ ದು
ಸ್ಥಾನವಾಗದೆ ಬಿಡದು ಸಂಶಯ
ವೇನಿದಕೆ ಕುರುರಾಯ ಚಿತ್ತೈಸೆಂದನಾ ಶಕುನಿ || (೩೭) ||
1.9.p46
ಶಯನದಲಿ ವಹ್ನಿಯಲಿ ವೈಹಾ
ಳಿಯಲಿ ಬೇಟೆಯಲೂಟದಲಿ ಕೇ
ಳಿಯಲಿ ಸುರತ ಕ್ರೀಡೆಯಲಿ ಮಜ್ಜನದ ಸಮಯದಲಿ ||
ಜಯದ ಜೋಕೆಯಲೋಲಗದ ಮರ
ವೆಯಲಿ ವಾರಸ್ತ್ರೀಯರುಗಳಲಿ
ಲಯವನೈದಿಸಬಹುದು ಚತ್ತೈಸೆಂದನಾ ಶಕುನಿ || (೩೮) |
1.9.p47
ರುಜೆಯನಲುಗುವ ರದನವ ದ್ರುಗು
ರಜವನನುಚಿತಜಾಯಜಾತ ಧೂಮ
ಧ್ವಜವ ರುಣವನವಿದ್ಯೆಯನು ಗೃಹವಾಸ ಕುಂಡಲಿಯ ||
ವೃಜಿನವನು ಕಂಪಿತವ ವೈರಿ
ವ್ರಜವನುಳುಹುವನೆಗ್ಗನೆಂಬಿದು
ಸುಜನರಭಿಮತ ನಿನ್ನ ಮತವೇನೆಂದನಾ ಶಕುನಿ || (೩೯) ||
1.9.p48
ಮಣಿದು ಕೂಪದ ಜೀವನವ ಕಡೆ
ಗಣಿಸದೇ ಘಟಯಂತ್ರ ಮೃಗರಿಪು
ಹಣಿಗಿದರೆ ಹರಿಣಂಗೆ ಗೆಲವೇ ಕಾರ್ಯಗತಿಯರಿದು ||
ಮಣಿವುದಳುಕುವುದಾವ ಪರಿಯಿಂ
ದೆಣಿಸಿ ಮನದಲಿ ವೈರಿ ರಾಯರ
ಹಣಿದವಾಡುವುಪಾಯವಿದು ಕೇಳೆಂದನಾ ಶಕುನಿ || (೪೦) ||
1.9.p49
ಅಹಿಯ ಬಾಧೆಯ ಬಲೆಗೆ ಸಿಲುಕಿದ
ಮಿಹಿರ ಬಿಂಬದವೋಲು ಮಾಯಾ
ವಿಹರಣದ ವೀಥಿಯಲಿ ಸಿಕ್ಕದ ಜೀವರುಗಳಂತೆ |
ಅಹಿತರುಪಟದೊಳಗೆ ಸಿಲುಕದೆ
ಕುಹಕರವ ದಿರ ಹರಿವ ನೆನೆ ಲೇ
ಸಹುದು ಕಾಲಕ್ಷೇಪವಿದಕೇನೆಂದನಾ ಶಕುನಿ || (೪೧)
1.9.p50
ನಂಬುವರ ನೆರೆ ನಂಬು ನಂಬದ
ಡಂಬಕರ ನಂಬದಿರು ಸಂಗರ
ವೆಂಬ ಮಾತಿಗೆ ಹಂಬಲಿಸಿ ಬೆಂಬೀಳ್ವಬಾಹಿರರ |
ನಂಬಿರದಿರರಿರಾಯ ಹನನ ವಿ
ಳಂಬನವ ಮಾಡದಿರು ರೋಷಾ
ಡಂಬರವ ರಚಿಸದಿರು ಬಹಿರಂಗದಲಿ ನೀನೆಂದ || (೪೨) ||
1.9.p51
ಖೂಳನಹ ದಾತಾರನನು ದು
ರ್ಮೇಳನಹ ಮಿತ್ರನನು ತನಗನು
ಕೊಲೆಯಲ್ಲದ ಸತಿಯನಂತರ್ದಾಯಿಯಹ ನರನ ||
ವ್ಯಾಳಯುತವಹ ನಿಳಯವಿನಿತುವ
ಕಾಲದಲಿ ವರ್ಜಿಸುವುದಲ್ಲದೊ
ಡೂಳಿಗವು ಹಿರಿದಹುದು ಚಿತ್ತೈಸೆಂದನಾ ಶಕುನಿ || (೪೩) ||
1.9.p52
ಎಲ್ಲರಿಂ ಬಹುಧನವ ಕೊಳು ನಿ
ನ್ನಲ್ಲಿ ಕಾಣಿಯ ಬರಿದೆ ಸೋಲದಿ
ರಿಲ್ಲವೆನ್ನದೆ ನುಡಿದು ಕಾಲಕ್ಷೇಪವನು ಮಾಡು ||
ಒಳ್ಳಿದನು ನಮಗೆಂಬ ನಯ ನುಡಿ
ಯೆಲ್ಲರಲಿ ಬೆಚ್ಚಂತೆ ರಿಪುಗಳ
ಗೆಲ್ಲಗೆಡಹುವ ಮಂತ್ರವಿದು ಕೇಳೆಂದನಾ ಶಕುನಿ || (೪೪)||
1.9.p53
ಧನವನಿತ್ತಾ ದೊಡೆಯು ಸಹ ಭೋ
ಜನವನುಂಡಾದೊಡೆಯು ಮೇಣ್ ನಿಜ
ತನುಜೆಯರನಿತ್ತಾದೊಡೆಯು ಬಳಿಸಂದು ಬೇಸರದೆ ||
ತನುವ ಬೆರಸಿದ್ದಾದೊಡೆಯು ನೂ
ತನಗುಣವ ನುಡಿದಾದೊಡೆಯು ರಿಪು
ಜನಪತಿಯ ವಶ ಮಾಳ್ಪುದುಚಿತವಿದೆಂದನಾ ಶಕುನಿ || (೪೫) ||
1.9.p54
ಕೋಶ ಪಾನದಿಗಳ ಮಾಡಿ ಮ
ಹೀಸುರರ ಮೇಲಾಯುಧಂಗಳ
ಸೂಸಿ ದೈವವ ಮುಟ್ಟಿ ದಿವ್ಯಾಜ್ಞೆಗಳಲೋಡಬಡಿಸಿ ||
ಹೇಸದರಿ ಭೂಪಾಲರನು ನಿ
ಶ್ಯೇಷವೆನಿಸುವುದಲ್ಲದಿರ್ದೊಡೆ
ಪೈಸರಿಸುವುದು ರಾಜಕಾರ್ಯವಿದೆಂದನಾ ಶಕುನಿ || (೪೬) ||
(ಇನ್ನೊಂದು ಅರ್ಥ:ಕೋಶಪಾನ= ಸಂಸ್ಕೃತದಲ್ಲಿ, ದೇವತಾವಿಗ್ರಹಕ್ಕೆ ಅಭಿಷೇಕ ಮಾಡಿದ ನೀರು- ತೀರ್ಥ - ಇದನ್ನು ದೇವರಮೇಲೆ ಆಣೆಮಾಡಿ ಕುಡಿದು ಶತ್ರುವನ್ನು ನಂಬಿಸಿ, ನಂತರ ಮೋಸದಿಂದ ಕೊಲ್ಲಬೇಕು, ಇದಕ್ಕೆ ಹೇಸಬಾರದು, ಹೆದರಬಾರದು. ಇಲ್ಲದಿದ್ದರೆ ರಾಜಕಾರ್ಯವು ಕೆಡುವುದು)()
1.9.p55
ನರಕವಿಲ್ಲದ ನರರು ನಾರಿಯ
ರುರುಬೆಯಿಲ್ಲದ ಯತಿಗಳಸುರರ
ವಿರಸವಿಲ್ಲದ ಸುರರು ಮಾಯಪಾಶವನು ಹರಿದ ||
ಪರಮ ತತ್ವಜ್ಞಾನಿಯವೋಲೀ
ಧರೆಯ ನರಪಾಲಕರುಗಳು ಹಗೆ
ಹರಿದು ಹೋಗಲಸಾಧ್ಯವಹುದೇನೆಂದನಾ ಶಕುನಿ || (೪೭) ||
1.9.p56
ಮಸಗೆ ಮೂಡಿದ ಹೊಲನು ದುಷ್ಟ
ಪ್ರಸರದೇಳಿಗೆ ಪಾಪಿಯೋಲಗ
ಹುಸಿಯ ಬಾಳುವೆ ಹುದುವಿನಾರಂಭದ ಫಲೋದಯವು ||
ನಸಿದು ಹೋಗದೆ ಲೋಕದೊಳಗವು
ಹೆಸರುವಡೆವವೆ ಹಗೆಯ ಹೆಚ್ಚುಗೆ
ಹಸನ ಕೊಡುವುದೆ ರಾಯ ಚಿತ್ತೈಸೆಂದನಾ ಶಕುನಿ || (೪೮) ||
1.9.p57
ಜಾತಿ ಬಾವನ್ನದಲಿ ಸರ್ಪದ
ಭೀತಿ ಸತ್ಪುರುಷರಿಗೆ ದುರ್ಜನ
ಭೀತಿ ದೇವಾದ್ಯರಿಗೆ ದನುಜಾದಿಗಳ ಬಲು ಭೀತಿ ||
ಜಾತ ಮಾತ್ರಕೆ ಜನನ ಮರಣದ
ಭೀತಿ ಬೆಂಬಿಡದಂತೆ ಗೋತ್ರಜ
ಭೀತಿ ಭೂಪಾಲರಿಗೆ ಹಿರಿದಹುದೆಂದನಾ ಶಕುನಿ || (೪೯) ||
1.9.p58
ಕರುಣಿಕರು ಕರಣಿಕರೊಡನೆ ಸಹ
ಚರರು ಸಹಚರರೊಡನೆ ಸಾವಂ
ತರಲಿ ಸಾವಂತರುಗಳಾ ಮಂತ್ರಿಯಲಿ ಮಂತ್ರಿಗಳು ||
ತರುಣಿಯರು ತರುಣಿಯರೊಡನೆ ಪರಿ
ಕರರು ಪರಿಕರರೊಡನೆಯಿರಲೊರ
ಸೊರಸು ಮಿಗೆ ಮಸೆವುದು ಕಣಾ ಭೂಭುಜನೆ ಕೇಳೆಂದ || (೫೦) ||
1.9.p59
ವ್ಯಾಕುಲಿತ ವಿಪ್ರರ ವಿಸತಿಯ ದಿ
ವಾಕರನ ಲೋಕಾಯತರ ರ
ತ್ನಾಕರನ ಲಾವಕರ ಹಿಸುಳರ ದಾಯಭಾಗಿಗಳ ||
ಶೋಕಿಗರ ಮಾಯಾವಿಗಳ ದ
ರ್ವೀಕರನ ವಿನಿಯೋಗಿಗಳ ಸ
ರ್ವೈಕ ಮತ್ಸರದೊಳಗೆ ಬದುಕುವನಾವ ಪೇಳೆಂದ || (೫೧) ||
1.9.p60
ಮಂಜು ಮಹಿಯನು ಮುಸುಕುವಂತೆ ಧ
ನಂಜಯನು ಕಾನನವ ಸುಡುವಂ
ತಂಜಿಕೆಗಳುಮ್ಮಾಹವನು ಹೊಯ್ದೊರಸುವಂದದಲಿ ||
ರಂಜಕರು ಪಾಂಡವರು ನಿನ್ನನು
ಭಂಜಿಸುವರಾವಂಗದಲಿ ನವ
ಕುಂಜರನ ಕಾಲಾಟ ಸಿಂಹಕೆ ಸೇರುವುದೆಯೆಂದ || (೫೨) ||
1.9.p61
ದನಿಗೆ ನಡೆದೊಳ ಪೊಕ್ಕು ಮರ ಗೂ
ಡಿನಲಿ ಸಿಲುಕಿದ ಹುಲಿಯವೋಲ್ ಕಾ
ನನದಿ ಬೀಸಿದ ಬಲೆಯೊಳಗೆ ಗಾನಕ್ಕೆ ಮನ ಸೋಲ್ದು ||
ಹನನವರಿಯದ ಮೃಗದವೋಲಿರು
ಬಿನಲಿ ಕೆಡಹಿದ ಕರಿಯವೋಲ್ ರಿಪು
ಜನಪರಭ್ಯುದಯದ ವಿನಾಶವನೆಸಗಬೇಕೆಂದ || (೫೩) ||
1.9.p62
ಎಂದು ದುರ್ಬೋಧೆಗಳ ನಾನಾ
ಚಂದದಲಿ ಬೋಧಿಸಿ ಸುನೀತಿಯ
ನಂದಗೆಡಿಸಿ ತದೀಯ ವಂಶಚ್ಛೇದ ಮಾರ್ಗವನು ||
ಒಂದುಗೂಡಿ ಸುಯೋಧನಂಗಾ
ನಂದವೆನಿಸಿ ಕಳಿಂಗ ಲೋಕವ
ಕೊಂದನೈ ಜನಮೇಜಯ ಕ್ಷಿತಿಪಾಲ ಕೇಳೆಂದ || (೫೪) ||
1.9.p63
ಎಮ್ಮ ಬಹುಮಾನಾವಮಾನವು
ನಿಮ್ಮದಲ್ಲದೆ ಬೇರೆ ನಮ್ಮಯ
ಸೊಮ್ಮು ಸಂಬಂಧದಲಿ ಹಿತವರ ಕಾಣೆ ನಾನಿನ್ನು ||
ಸಂಮತದೆ ಪಾಂಡವರಿಗಗ್ನಿಯ
ಲೊಮ್ಮೆ ಹರಿವನು ನೆನೆವೆನೊದವಿದ
ಡೆಮ್ಮ ಸುಕೃತೋದಯದ ಫಲವೆಂದನು ಸುಯೋಧನನು || (೫೫) ||
1.9.p64
ಪಾಂಡವರನ್ನು ಹಸ್ತಿನಾಪುರದಿಂದ ಕಳಿಸಲು ದುರ್ಯೋಧನನು ಧೃತರಾಷ್ಟ್ರನನ್ನು ಒಪ್ಪಿಸುವುದು
1.9.p65
ಎನೆ ಕಳಿಂಗಾದಿಗಳು ತಂತ
ಮ್ಮನುಮತವ ಹೇಳಿದರು ಕೌರವ
ಜನಪನವರಿಗೆ ಕೇಡ ನಿಶ್ಚೈಸಿದನು ಮನದೊಳಗೆ |
ಜನಕನಲ್ಲಿಗೆ ನಡುವಿರುಳು ಬಂ
ದನು ನಯದೊಳೀ ಮಾತ ತೆಗೆದೆಂ
ದನು ವೃಕೋದರ ನೂಳಿಗವನರ್ಜುನನ ಸಾಹಸವ || (೫೬)
1.9.p66
ಅರಿಗಳುದ್ಭವವಿನ್ನು ಗಂಟಲ
ನರಿವುದೆಮ್ಮನು ನೂರು ಮಕ್ಕಳ
ನರಸ ಬರಿದೇ ಹಡೆದು ಕೆಡಿಸಿದೆ ತಾಯ ಜವ್ವನವ |
ಇರಲಿ ಭೀಮಾರ್ಜುನರು ಹಸ್ತಿನ
ಪುರದೊಳಮ್ಮಿನಿಬರನು ದೇಶಾಂ
ತರೆಕೆ ನೇಮಿಸು ಜೀಯ ನೂಕದು ಭೀಮನೊಡನೆಂದ || (೫೭)
1.9.p67
ಅಕಟ ಮಗನೇ ಧರ್ಮಸುತ ಬಾ
ಧಕನೆ ಭೀಮಾರ್ಜುನರ ಮತಿ ಕಂ
ಟಕದೊಳೆರಗದು ಮೀರಿ ನಡೆಯರು ಧರ್ಮನಂದನನ ||
ಸಕಲ ರಾಜ್ಯಕೆ ಪಾಂಡುವೇ ಪಾ
ಲಕನು ತನ್ನೊಳು ತಪ್ಪಿದನೆ ಬಿಡು
ವಿಕಳ ಮತಿಗಳ ಮಾತನೆಂದನು ಮಗಗೆ ಧೃತರಾಷ್ಟ್ರ || (೫೮) ||
1.9.p68
ಬೊಪ್ಪ ಬಿನ್ನಹವವರ ಜನಕನು
ತಪ್ಪಿ ನಡೆಯನು ನಿಮಗೆ ನೀವಿ
ನ್ನೊಪ್ಪಿಸುವುದಾ ಪಾಂಡುಸುತರಿಗೆ ರಾಜ್ಯ ವೈಭವವ |
ಅಪ್ಪುದಿಳೆ ಧರ್ಮಜನ ತರುವಾ
ಯಪ್ಪುದಾ ವಿಧಿಯಲ್ಲಿ ಸಂತತಿ
ತಪ್ಪದವರಿಗೆ ಸಲಲಿ ನೆಲವಿದು ಹೊಲ್ಲೆಹೇನೆಂದ || (೫೯)
1.9.p69
ಜನಪ ಸುಖದಲಿ ನಿಮ್ಮ ತಮ್ಮನ
ತನುಜರೊಡನೆಯು ರಾಜ್ಯ ಮಾಡುವು
ದನುನಯವಲಾ ಬೀಳುಕೊಡುವುದು ನಮ್ಮ ನೂರ್ವರನು ||
ಜನಪರುಂಟೋಲೈಸಿ ಕೊಂಬರೆ
ತನಗಿರದೆ ಖಂಡೆಯದ ಸಿರಿ ಕರೆ
ಜನನಿಯನು ಬೀಳ್ಕೊಂಬೆವಿನ್ನೇನೆಂದು ನಿಂದಿರ್ದ || (೬೦) ||
1.9.p70
ಅರಗಿನ ಮನೆಯಲ್ಲಿ ಸುಡುವ ಯೋಜನೆ
1.9.61
ಎಲೆಮಗನೆ ಎನ್ನಾಣೆ ಬಾ ಕುರು
ಕುಲತಿಲಕ ನೀಹೋಗಲೆನ್ನೊಡ
ಲುಳಿವುದೇ ಮರಿಯಾನೆ ಬಾರೈ ಕಂದ ಬಾಯೆಂದು |
ಸೆಳೆದು ಬಿಗಿಯಪ್ಪಿದನುಕಂಬನಿ
ದುಳುಕಿದನು ಹೇಳಿನ್ನು ಮೇಲಣ
ಬಳಕೆಯನು ರಿಪುರಾಜ ಕಾರ್ಯಕೆ ಬುದ್ಧಿಯೇನೆಂದ || ೬೧ ||
1.9.61_71
ಎಲೆಮಗನೆ ಎನ್ನಾಣೆ, ಹೊಗಬೇಡ! ಬಾ ಕುರುಕುಲತಿಲಕ ನೀ ಹೋಗಲು+ ಎನ್ನೊಡಲು+ ಉಳಿವುದೇ= ನೀನು ನನ್ನನು ಬಿಟ್ಟು ಹೋದರೆ ನನ್ನ ಈ ದೇಹ ಉಳಿಯುವುದೇ? ನಾನು ಬದುಕಿರುವುದಿಲ್ಲ, ಮರಿಯಾನೆ (ಮರಿಯಾನೆಯಂತಿರುವ ಮುದ್ದು ಮಗನೇ), ಬಾರೈ ಕಂದ ಬಾಯೆಂದು, ಸೆಳೆದು ಬಿಗಿಯಪ್ಪಿದನು= ಮಗನನ್ನು ಎಳೆದುಕೊಂಡು ಬಿಗಿಯಾಗಿ ಅಪ್ಪಿಕೊಂಡು ಸಮಾಧಾನ ಪಡಿಸಿದನು. ಕಂಬನಿದುಳುಕಿದನು= ದುರ್ಯೋಧನನು ಬಿಟ್ಟು ಹೋಗುವೆನೆಂದುಕ್ಕೆ ದೃತರಾಷ್ಟ್ರನ ಕಣ್ಣಲ್ಲಿ ನೀರು ತುಂಬಿತು, ಹೇಳಿನ್ನು ಮೇಲಣ ಬಳಕೆಯನು= ಹೇಳು ಇನ್ನ ಮುಂದೆ ಬಳಸುವ ಉಪಾಯವನ್ನು, ರಿಪುರಾಜ ಕಾರ್ಯಕೆ= ಶತ್ರುರಾಜರ ನಿವಾರಣೆಯ ಕಾರ್ಯಕ್ಕೆ, ಬುದ್ಧಿಯೇನೆಂದ= ನೀನು ಮಾಡಿದ ಬುದ್ಧಿವಂತಿಕೆಯ ಉಪಾಯವು ಏನು ಎಂದ.
1.9.62
ನೀರ ವಿಷವಿಕ್ಕಿದೆವುಕಿಚ್ಚಿನ
ಭಾರವಣೆಯೇನಹುದೊ ಪುಣ್ಯವ
ಹೋರಿಸುವ ಒದಗಿದರೆ ಹೋಗಲಿ ನಮ್ಮ ಹಗೆ ಹರಿದು ||
ಓರಣಿಸಿತೈವೈರಿಗಳ ವಿ
ಸ್ತಾರ ಮೆರೆಯಲಿ ಜೀಯ ಜೂಜಿನ
ಬಾರುಗುತ್ತಿದು ನಿಮ್ಮ ಚಿತ್ತಕೆ ಬಹಡೆ ಮಾಡುವೆವು ||೬೨||
1.9.63
ಆವ ತೆರದಲಿ ವೈರಿಭಟಕುಲ
ದಾವಿಗೆಯನಿಡಿಸುವಿರಿ ನಿಮ್ಮೊಳ
ಗಾವು ಹೊರಗೇ ಮಗನೆ ಸೊಗಸೆನೆ ನಿಮ್ಮವೈಭವಕೆ ||
ಸಾವರಾವಂದದಲಿ ಮಿಗೆ ಸಂ
ಭಾವಿಸುವುದಾ ತೆರನ ನೀ ಹೇ
ಳಾವು ಸೊಗಸುವೆವೆಂದುನುಡಿದನು ಮಗಗೆ ಧೃತರಾಷ್ಟ್ರ ||೬೩ ||
1.9.64
ಕರೆಸಿ ಪಾಂಡು ಕುಮಾರಕರ ನೀ
ಧರೆಯ ಹಸುಗೆಯ ಮಾಡಿಕೊಡು ಕರಿ
ತುರುಗ ಭಂಡಾರವನು ಸಹ ದಾಯಾದ ವಿಷಯದಲಿ ||
ಇರವನವರಿಗೆ ವಾರಣಾವತಿ
ಪುರದೊಳಗೆ ಪರುಠವಿಸಿ ಕೊಡು ತಾ
ನುರುಹಿ ಸುಡುವೆನು ಬಳಿಕಲಾಕ್ಷಾಭವನ ರಚನೆಯಲಿ ||೬೪ ||
1.9.65
ಅಹುದು ಮಗನೇ ಮಂತ್ರವಿದು ಮತ
ವಹುದು ನಮಗೀ ಭೀಷ್ಮ ವಿದುರರು
ಕುಹಕಿಗಳು ಕೃತಭಿನ್ನವಾದರೆ ಭಾರವದು ಮೇಲೆ ||
ಗಹನ ಗತಿಯಲಿ ಗೂಢತರ ಸ
ನ್ನಿಹಿತ ಕರ್ಮ ಕಲಾಪದಲಿ ರಿಪು
ದಹನ ಸಿದ್ಧಿಯ ನೆನೆವುದೆಂದನುಮಗಗೆ ಧೃತರಾಷ್ಟ್ರ ||೬೫||
1.9.66
ಜನಕನನು ಬೀಳ್ಕೊಂಡುಕೌರವ
ಜನಪ ತನ್ನರಮನೆಯ ಸಚಿವರೊ
ಳನುಪಮಿತ ವಿಶ್ವಾಸ ಸೂಚಕನನು ಪುರೋಚನನ ||
ನೆನೆದ ರೌರವ ರಾಜಕಾರ್ಯದ
ಘನವನರುಹಿ ಸಮಗ್ರ ಧನ ಸಾ
ದನವ ಜೋಡಿಸಿಕೊಟ್ಟು ಕಳುಹಿದನವನ ಗುಪ್ತದಲಿ ||೬೬ ||
1.9.67
ಆ ಪುರೋಚನನೆಂಬುವನು ಬಲು
ಪಾಪಕರ್ಮನು ಕುರುಪತಿಗೆ ಬಳಿ
ಕಾ ಪುರಾಂತರದಿಂದ ಬಂದನು ವಾರಣಾವತಿಗೆ ||
ಆ ಪುರದ ಜನರರಿಯದಂತಿರೆ
ಕಾಪುರುಷನಳವಡಿಸಿದನು ನಸು
ದೀಪ ತಾಗಿದೊಡೆಏಕರೂಪಹ ರಾಜಭವನವನು ||೬೭ ||
1.9.68
ನಿಗಮ ಪರಿಸ್ಥಿತ ವಾಸ್ತು ರಚನಾ
ದಿನಗಳನಾಯವ್ಯದ ತಾರಾ
ದಿಗಳ ರಾಶಿಗ್ರಹ ಬಲದ ವಿಪರೀತ ಯೋಗದಲಿ ||
ಹಗಲು ತೀರಲು ತಳಿತ ಕೈ ದೀ
ವಿಗೆಯ ಹಂತಿಯ ಬೆಡಗಿನಲಿ ಕೇ
ಡಿಗನು ಕೃತ್ರಿಮ ರಚನೆಯಲಿ ಮಾಡಿಸಿದನರಮನೆಯ || ೬೮ ||
1.9.69
ಅರಗಿನಲಿ ಭಿತ್ತಿಗಳ ನವ ಸ
ಜ್ಜರಸ ಗುಡ ಮಿಶ್ರದಲಿ ನೆಲೆಯು
ಪ್ಪರಿಗೆಗಳನವರಲಿ ಕವಾಟ ಸ್ತಂಭ ವೇಧಿಗಳ |\
ವಿರಚಿಸಿದ ನವ ಸೌಧಭದ್ರಾ
ಸ್ತರಣನಂದ್ಯಾವರ್ತದಲಿಪರಿ
ಪರಿಯ ಬಿನ್ನಾಣದೊಳರಗಿನ ಮನೆಯ ಮಾಡಿಸಿದ || ೬೯ ||
1.9.69_72
ನಂದ್ಯಾವರ್ತ= ಪಶ್ಚಿಮದ ಬಾಗಿಲಿಲ್ಲದ (ಹಿಂಬಾಗಿಲಿಲ್ಲದ) ಒಂದು ಬಗೆಯ ವರ್ತುಲಾಕಾರದ ವಿಶಿಷ್ಟಾಕೃತಿಯ ಕಟ್ಟಡ.
1.9.70
ಹಿರಿಯ ಭವನದ ಸುತ್ತುವಳಯದ
ಮುರುಹಿನಲಿ ಮನೆಮನರಗಳಾ ಮಂ
ದಿರ ನಿಕಾಯಕೆ ಬಾಗಿಲೊಂದಾ ದ್ವಾರದೇಶದಲಿ ||
ಇರವು ತನ್ನದು ಬಾಗಿಲಿಕ್ಕಿದು
ಹೊರಗೆ ಮುದ್ರಸಿಕಿಚ್ಚ ಹಚ್ಚುವ
ಪರುಠವಣೆಯಲಿ ಖಳ ಪುರೋಚನನಂದು ನಿರ್ಮಿಸಿದ ||೭೦ ||
1.9.70_73
ಧೃತರಾಷ್ಟ್ರನು, ಪಾಂಡವರುನ್ನು ವಾರಣಾವತಕ್ಕೆ ಹೋಗಿರಲು ಒಪ್ಪಿಸಿದನು
1.9.71
ಧರಣಿಪತಿ ಕೇಳಿತ್ತ ಹಸ್ತಿನ
ಪುರದೊಳಗೆ ಕುಂತೀ ಕುಮಾರರ
ಕರೆಸಿ ಕಟ್ಟೇಕಾಂತದಲಿ ಧೃತರಾಷ್ಟ್ರ ಭೂಪಾಲ ||
ಬೆರಗು ಬಿನ್ನಾಣದಲಿ ಮಕ್ಕಳ
ಮರುಳು ಮಾಡಿದನೇನ ಹೇಳುವೆ
ನುರಿವ ಮನೆಯ ಬೀಡಾರದಲಿ ಬಿಡಿಸಲ್ಕೆ ಮನ ದಂದ ||೭೧ ||
1.9.72
ದುರುಳರೀ ಕೌರವರು ನೀವತಿ
ಗುರುವರವದಿರು ಪಾಪಕರ್ಮರು
ಪರಮಪುಣ್ಯರುನೀವು ತನ್ನವದಿರು ಕುಮಂತ್ರಿಗಳು ||
ಎರಳೆ ತೋಳನ ಸಾಧು ಸುಣ್ಣದ
ನೆರವಿಗದು ವಾವಗೆಯುಸೇರುವೆ
ಯರಸ ನಿನ್ನೊಡನೆನ್ನ ಕುನ್ನಿಗಳೆನುತ ಬಿಸು ಸುಯ್ದ || ೭೨ ||
1.9.72_74
(ಸಾಧು= ಕೆಂಪು ಚಂದನದ ತಿಲಕ- ಗಂಡಸರು ಹಣೆಗೆ ಸಾಧುವನ್ನು ಇಟ್ಟುಕೊಳ್ಳುವುದು ಎಂದು ಈಗಲೂ ಮಲೆನಾಡಿನ ಕೆಲವು ಗ್ರಾಮಗಳಲ್ಲಿ ರೂಡಿಯಲ್ಲಿದೆ.)
1.9.73
ತಂದೆಯಿಲ್ಲದ ನಿಮಗೆ ಹಿತರಾ
ರೆಂದು ಮರುಗುವೆನೆನ್ನ ಮಕ್ಕಳು
ಕೊಂದು ಹಿಂಡು ಕೂಳನುಂಬರೆ ಹೇಸುವವರಲ್ಲ ||
ಇಂದು ನಿಮಗವರಿಂದಲುಪಹತಿ
ಬಂದುದಾದರೆ ತನ್ನ ತಲೆಯಲಿ
ನಿಂದು ಹೊರುವುದಕೀರ್ತಿಕಿಲ್ಬಿಷ ಮಗನೆ ಕೇಳೆಂದ || ೭೩ ||
1.9.74
ತಾತ ಕೆಡುವಿರಿ ನೀವು ತನಗ
ಖ್ಯಾತಿ ಕೌರವರೆಂಬುವರು ದು
ರ್ನೀತಿಕಾರರರು ಭೀಷ್ಮ ವಿದುರರು ಭೀತರವದಿರಿಗೆ ||
ನೀತಿ ಸಮ್ಮತವಾಗಿ ಚಿತ್ತದೊ
ಳಾತ ಮತವನು ಹೇಳಿ ನಮ್ಮೊಳು
ಬೀತಿ ಬೇಡೆಂದರಸ ಹಿಡಿದನು ಧರ್ಮಜನ ಕರವ || ೭೪ ||
1.9.75
ಬೇರೆ ಮತವೆಮಗೇನು ಬೊಪ್ಪನ
ಚಾರಿ ನಿಮ್ಮದು ನೀವು ಬೊಪ್ಪನ
ನೂರುಮಡಿಯೆಮಗೊಳ್ಳಿದರು ಬೇರಿನ್ನ ಹಿತರುಂಟೆ ||
ಬೇರಿರಿಸಿ ಕೊಡಿಸಿರಿ ನಿಮಗೆಯು
ತೋರಿದುದೆ ಮತ ನಿಮ್ಮ ನೇಮವ
ಮೀರಬಲ್ಲನೆ ಯೆಂದುಧರ್ಮಜ ನುಡಿದನರಸಂಗೆ ||೭೫ ||
1.9.76
ಎರೆವ ವಂಕಿಯೊ ಕಳಿತ ಮೆಕ್ಕೆಯೊ
ಹುರಿಯ ಬಲೆಯೋ ರಾಗ ಸನ್ನೆಯೊ
ಸರಿಯ ಗೊರೆಯೋ ಠಕ್ಕಿನುಂಡೆಯೊಸವಿಯ ಚಿತ್ರಕವೊ ||
ಅರಸನಂಕೆಯ ಮನದ ಬಯಕೆಯ
ಹೊರೆಯ ಬಳಕೆಯನೀ ಸಮಂಜಸ
ತರದ ಸಾತ್ವಿಕರೆತ್ತಬಲ್ಲರು ಭೂಪ ಕೇಳೆಂದ |} ೭೬||
1.9.77
ಕಂದ ಮನ ಮುನಿಸಿಲ್ಲಲೇ ನಾ
ವೆಂದ ನುಡಿಗೊಡಂಬಡುವಿರಾದೊಡೆ
ಮುಂದೆ ಪುರವಿದೆ ವಾರಣಾವತವಿಲ್ಲಿಗರವತ್ತು ||
ಸಂದ ನಾಡು ಸಮಸ್ತ ವಸ್ತುಗ
ಳಿಂದ ಪೂರಿತ ಹಸ್ತಿನಾಪುರ
ದಿಂದ ಮಿಗಿಲುದು ರಾಜಧಾನಿಸ್ಥಾನ ನಿಮಗೆಂದ || ೭೭ ||
1.9.78
ಹೈ ಹಸಾದ ಭವತ್ ಕೃಪಾ ಸ
ನ್ನಾಹವೇ ಸಾಮ್ರಾಜ್ಯವಾವುದ
ನೊಹಿಸಿದೊಡಾ ಸ್ಥಿತಿಯೊಳಗಡಗಿಹೆವೆಂದು ವಿನಯದಲಿ ||
ಗಾಹುಗತಕವನರಿಯದಿವರು
ತ್ಸಾಹದಲಿ ಕೈಕೊಂಡು ಭೀಷ್ಮಗೆ
ಬೇಹ ವಿದುರ ದ್ರೋಣಮುಖ್ಯರಿಗರುಹಿದರು ಹದನ || ೭೮ ||
1.9.78_75
ಹೈ ಹಸಾದ ಭವತ್= ತಮ್ಮ, ಕೃಪಾ ಸನ್ನಾಹವೇ ಸಾಮ್ರಾಜ್ಯವು= ತಮ್ಮ ಮಾತಿಗೆ ಒಪ್ಪಿಗೆ, ಪ್ರಸಾದ, ತಮ್ಮ ಕೃಪೆಯ ಕೊಡಿಗೆಯೇ ನಮಗೆ ಸಾಮ್ರಾಜ್ಯ. ಆವುದನು+ ಒ/ವಹಿಸಿದೊಡೆ ಆ ಸ್ಥಿತಿಯೊಳಗೆ+ ಅಡಗಿಹೆವು= ನೀವು ಯಾವದನ್ನು ಕೊಟ್ಟರೂ, ನಾವು ಅದಕ್ಕೆ ತಕ್ಕಂತೆ ಇರುವೆವು, ಎಂದು ವಿನಯದಲಿ= ಎಂದು ವಿನಯದಿಂದ ಹೇಳಿದರು., ಗಾಹುಗತಕವನು= ಮೋಸವನ್ನು, ಅರಿಯದ+ ಇವರು+ ಉತ್ಸಾಹದಲಿ= ಉತ್ಸಾಹದಿಂದ, ಕೈಕೊಂಡು= ಒಪ್ಪಿ, ಭೀಷ್ಮಗೆ ಬೇಹ= ಮಹಾಪಂಡಿತ. 2 ಗುಪ್ತಚಾರ, ವಿದುರ ದ್ರೋಣಮುಖ್ಯರಿಗೆ+ ಅರುಹಿದರು= ಹೇಳಿದರು, ಹದನ= ವಿಚಾರವನ್ನು.
1.9.79
ಧಾರುಣೀಪತಿ ರತ್ನಮಯ ಭಂ
ಡಾರ ಸಹಿತ ಗಜಾಶ್ವ ರಥ
ಪರಿವಾರವನು ಮಾಡಿದನು ಹಸಿಗೆಯನೆರಡು ಭಾಗವನು ||
ಕೌರವರಿಗೊಂದಿವರಿಗೊಂದೆನ
ಲೋರಣದೊಳಡವಡಿಸಿ ಬಹು ವಿ
ಸ್ತಾರದಲಿ ಭೀಷ್ಮಾದ್ಯರಹುದೆನಲಿವರ ಮನ್ನಿಸಿದ || ೭೯ ||
1.9.80
ಇವರು ಶಭದಿನ ಶಭ ಮುಹೂರ್ತ
ಪ್ರವರದಲಿ ಹೊರಹೊಂಟರಾ ಜನ
ನಿಹವ ಮರುಗಿತರಣ್ಯವೇ ಗತಿಯರಸ ನಮಗೆಂದು ||
ಅವರ ಕಳುಹುತ ಬಂದರಾ ಕೌ
ರವರು ನಿಂದರು ಭೀಷ್ಮ ಕಲಶೋ
ದ್ಭವರು ಸುತರಿಗೆ ಬುದ್ಧಿಹೇಳಿದು ಮರಳಿದರು ಪುರಕೆ ||೮೦ ||
1.9.81
ವಿದುರನೊಡನೈತರುತ ಸಂಕೇ
ತದಲಿ ಸೂಚಿಸಿ ಮರಳಿದನು ನೃಪ
ಸುದತಿ ವರ ಗಾಂಧಾರಿ ಮೊದಲಾದಖಿಳರಾಣಿಯರು ||
ಮುದದಮುರುವಿನಲಿವರತೆಗೆದ
ಪ್ಪಿದರು ಭೂಪತಿ ಸಹಿತ ಕಡು ಶೋ
ಕದಲಿ ಕಳುಹಿಸಿಕೊಂಡು ಬಂದರು ಹಸ್ತಿನಾಪುರಕೆ ||೮೧ ||
1.9.82
ಅರಸ ಕೇಳೈ ಹಸ್ತಿನಾಪುರ
ವರವ ಹೊರನೆಡೆವಾ ಮುಹೂರ್ತಕೆ
ವರುಷವಿಪ್ಪತ್ತೊಂಭತ್ತಾದುದು ಧರ್ಮನಂದನಗೆ ||
ವರಷ ಹದಿಮೂರರಲಿ ಹಸ್ತಿನ
ಪುರದೊಳಿದ್ದರು ಹಿಂದೆ ಶೋಡಶ
ವರುಷ ವನದೊಳಗಿಂತು ಲೆಕ್ಕವ ನೋಡಿಕೋಯೆಂದ || ೮೨ ||
1.9.82_76
ವಾರಣಾವತದಲ್ಲಿ ಪಾಂಡವರು - ಅರಗಿನಮನೆಯ ಅವಗಡದಿಂದ ಪಾರು
1.9.83
ಬಂದರೈವರು ಕುಂತಿ ಸಹಿತಾ
ನಂದದಲಿ ವರ ವಾರಣಾವತ
ಕಂದು ಪುರಜನ ಕೂಡಿ ಕನ್ನಡಿ ಕಳಸ ವಿಭವದಲಿ ||
ಬಂದು ತಾವಿದಿರಾಗಿ ಕುಂತೀ
ನಂದನರ ಹೊಗಿಸಿದರು ಪಟ್ಟಣ
ವಂದು ಮೆರೆದುದು ಕೂಡೆ ಗುಡಿ ತೋರಣ ರಚನೆಯಲಿ || ೮೩ ||
1.9.84
ಬೀಡು ಕಾಣಿಕೆಯಿತ್ತು ಕಂಡುದು
ನಾಡೆ ಕಾಣಿಸಿದನು ಪುರೋಚನ
ಕೂಡೆ ಸಂದನು ಹಾಸುಹೊಕ್ಕಗವರ ಮನವರಿದು ||
ನೋಡಿದನು ಯಮನಂದನನು ಮನೆ
ಮಾಡಿದಂದವನರಗಿನರಮನೆ
ಗೂಡುರಿವ ಬೇಳುವೆಯ ನೆನೆದರೆ ಬೊಪ್ಪನವರೆಂದ || ೮೪ ||
1.9.85
ಸಮಿಧೆಗಳು ನಾವ್ ನಾಲ್ವರಯ್ಯನ
ರಮಣಿಯಾಹುತಿ ಭೀಮನೇ ಪಶು
ಕುಮತಿ ಕಟ್ಟಿಸಿದರಮನೆಯಗ್ನಿ ಕುಂಡವಿದು ||
ಎಮಗೆ ಸಂಶಯವಿಲ್ಲ ರಾಜೋ
ತ್ತಮನೊ ದುರ್ಯೋಧನನೊ ದೀಕ್ಷಾ
ಕ್ರಮವ ಧರಿಸಿದವನಾವನೆಂದನು ನಗುತ ಯಮಸೂನು || ೮೫ ||
1.9.86
ಜನಪ ಕೇಳೈ ವಿದುರನಟ್ಟಿದ
ಖನಕ ಬಂದನುಯಿವರ ಸಜ್ಜೆಯ
ಮನೆಯಲತಿ ಗುಪ್ತದಲಿ ನೆಲದೊಳು ಸವೆಸಿದನು ಪಥವ ||
ಅನುದಿನದೊಳಾ ಬಾಹಿರನು ಕಿ
ಚ್ಚಿನಲಿ ಚುಚ್ಚುವ ಸಂದುಗಟ್ಟನು
ನೆನೆವುತಿರ್ದನು ಖಳ ಪುರೋಚನನೊಡೆಯನಾಜ್ಞೆಯಲಿ ||೮೬ ||
1.9.87
ಒಂದು ದಿನ ಹಬ್ಬದಲಿ ಭೂಸುರ
ವೃಂದವುಂಡುದು ಪಂಚ ಪುತ್ರಿಕೆ
ಯೆಂದು ಬೇಡತಿಯೊಬ್ಬಳಿದ್ದಳು ಸುತರು ಸಹಿತಲ್ಲಿ ||
ಅಂದಿನಿರುಳು ಪುರೋಚನನು ತಾ
ನೊಂದ ನೆನೆದರೆ ದೈವಗತಿ ಬೇ
ರೊಂದ ನೆನೆದುದು ಕೇಳು ಜನಮೇಜಯ ಮಹೀಪಾಲ || ೮೭ ||
1.9.88
ಅವನು ನಿದ್ರೆಯೊಳರಿಯದಿರಲುಆ
ಭವನ ಮುಖದಲಿ ಕಿಚ್ಚನೊಟ್ಟಿಸಿ
ಪವನಸುತ ಸಹಿತಿವರು ಹಾಯ್ದರು ಬಿಲದ ಮಾರ್ಗದಲಿ ||
ಅವರು ಬೆಂದರು ಮುನ್ನ ಬಳಿಕಾ
ಭವನ ಪಂಕ್ತಿಗಳುರಿದು ಕರಗಿದ
ವವನಿಯಲಿ ಹೊನಲಾಯ್ತು ಪುರಜನವೈದೆ ಬೆರಗಾಗೆ || ೮೮ ||
1.9.89
ಅಕಟ ಪಾಂಡವರಳಿದರೇ ಕೌ
ಳಿಕದಿ ಕೌರವರಿರಿದರೇ ಮತಿ
ವಿಕಳರವದಿರು ಬೆಂದು ಹೋದರು ಧರ್ಮದಲಿ ನೆಡೆದು ||
ಪ್ರಕಟ ಪಾಪರಿಗಹುದು ಸಾಮ್ರಾ
ಜ್ಯಕವು ಧರ್ಮಾತ್ಮರಿಗೆಯೀ ಪರಿ
ವಿಕಟತೆಯ ಸುರ ರಾಜ್ಯವೆಂದುದು ಪೌರಜನ ಮರುಗಿ || ೮೯ ||
1.9.90
ಮುನ್ನ ಬೆಂದನಲಾ ಪುರೋಚನ
ಕುನ್ನಿಯದು ಲೇಸಾಯ್ತು ಹದನಾ
ಪನ್ನರಾದರೆ ಅವ್ಯೆಯರು ಸಹಿತಕಟ ಪಾಂಡವರು ||
ಇನ್ನು ಸುಡು ಸುಡು ಧರ್ಮ ಸಂಪ್ರತಿ
ಪನ್ನ ಗಣದಾಚಾರಗಳ ಸಂ
ಪನ್ನತೆಯನೆಂದೊರಲಿ ಮರುಗಿತು ನಿಖಿಲ ಪರಿವಾರ || ೯೦ ||
1.9.91
ಒಗೆದುದೀ ಬೇಳಂಬ ಹಸ್ತಿನ
ನಗರಿಯಲಿ ತತ್ಪೌರಜನ ಮನ
ವುಗಿದು ಬಿದ್ದುದು ಶೋಕಮಯ ಸಾಗರದ ಮಧ್ಯದಲಿ ||
ಹೊಗೆದುದಾನನ ವಿದುರಭೀಷ್ಮಾ
ದಿಗಳಿಗಾಧೃತರಾಷ್ಟದರ ಸುತರಿಗೆ
ದುಗುಡ ದಡ್ಡಿಯ ಹರಷಸಿರಿ ಹೊಕ್ಕಳು ಮುಖಾಂಬುಜವ || ೯೧ ||
1.9.92
ಬಂದುದಾ ಸುರನದಿಗೆ ಕೌರವ
ವೃಂದ ಪರಿಜನವೈದೆ ಶೋಕಿಸಿ
ಮಿಂದು ಗಂಗಾತೀರದಲಿ ಬಳಿಕೂರ್ಧ್ವದೇಹಿಕವ ||
ಸಂದ ವಿಧಿಯಲಿ ಮಾಡಿ ಪರಮಾ
ನಂದ ಮಿಗಲವರಿರ್ದರಿತ್ತಲು
ಇಂದು ಕುಲಸಂಭವರ ವಿಧಿಯನು ಮತ್ತೆ ಕೇಳೆಂದ ||೯೨ ||
1.9.93
ಬಿಲಮುಖದೊಳುತ್ತರಿಸಿ ಬಲಗ
ತ್ತಲೆಯೊಳಡವಿಯ ಮಾರ್ಗದಲಿ ಕಲು
ಮುಳುಗಳೊಳು ಕಾಪಥಕೆ ಕೋಮಲ ಚರಣ ಕೊಡುತ ||
ತೋಳಲಿದರು ಬೆಳಗಾಗೆ ಹಳ್ಳಿಯ
ಬಳಿಯ ಹೊದ್ದದೆ ಹಾಯ್ದು ಹೊಕ್ಕರು
ಹಳುವವನು ಬೆಳಗಡೆಗೆ ನಡೆದರು ಹಲವು ಯೋಜನವ || ೯೩ ||
1.9.94
ದಾಟಿದರು ಗಂಗೆಯನು ರಾಯನ
ಮಾಟದಲಿ ಹಲುಮುರಿದುದೇ ನ
ಮ್ಮಾಟಕಿದು ಹಿರಿದಲ್ಲಲಾಯೆನುತೈವರಡಿಗಡಿಗೆ ||
ಕೋಟಲೆಯ ಕೊಲ್ಲಣಿಗೆಯಲಿ ಮೈ
ನೋಟಕಲಸದೆ ಬಿಸಿಲಲವರು ಮ
ಹಾಟವಿಯ ಮಧ್ಯವನು ಹೊಕ್ಕರು ನೃಪತಿ ಕೇಳೆಂದ || ೯೪ ||
1.9.94_78
♦
♦♣♣♣♣♣♣♣♣♣♣♣♣♣♣♣♣♣♣♣♦
ॐ
1.9.94_79
ನೋಡಿ
1.9.94_80
*ಕುಮಾರವ್ಯಾಸ ಭಾರತ
* ಕುಮಾರವ್ಯಾಸಭಾರತ-ಸಟೀಕಾ
* ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೧)
* ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೨)
* ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೩)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೪)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೫)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೬)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೭)
*ಕುಮಾರವ್ಯಾಸ ಭಾರತ/ಸಟೀಕಾ (ಪರ್ವ-೧::ಸಂಧಿ-೮)
1.9.94_81
ಪರಿವಿಡಿ
1.9.94_82
ಉಲ್ಲೇಖ