Pramāṇa · Search · About · API

Karnata Bharata Kathamanjari 1.9.p33

Karṇāṭa Bhārata Kathāmañjarī 1.9.p33

Language
Kannada

1.9.p33

ಬಿಡದೆ ಸುಖ ದುಃಖಗಳೊಳೊಂದನು
ಹಿಡಿದು ಸದ್ವ್ಯವಹಾರ ಮುಖದಲಿ
ನಡೆಯಲೊಂದರ ತುಷ್ಟಿಯೊಂದರ ನಷ್ಟ ತನಗಹುದು |
ಹಿಡಿವುದಿಹಪರವೆರಡರೊಳಗಳ
ವಡಿಕೆ ತನಗಹುದೊಂದನೊಂದನು
ಬಿಡುವುದಲ್ಲದೆ ಬೇರೆ ಮತವಿಲ್ಲೆಂದನಾ ಶಕುನಿ || (೨೫)
ಇಹ- ದುರ್ಯೋಧನನಿಗೆಹಿತವಾದುದು- ಶತ್ರುವಿಲ್ಲದರಾಜ್ಯ, ಪರ- ಮರಣಾನಂತರ ಸ್ವರ್ಗಲೋಕ ವಾಸ, ಈ ಎರಡದನ್ನೂ ಸಾಧಿಸುವ ಮಾರ್ಗ ಇಲ್ಲದೆಹೋದಾಗ, ಒಂದನ್ನು ಬಿಡಬೇಕಾಗುವುದು. ತನಗೆ ಯಾವುದರಿಂದ ಒಳಿತಾಗುವದೋ ಆ ಒಂದನ್ನು ಅಳವಡಿಸಿಕೊಳ್ಳಬೇಕು ಅಥವಾ ಅನುಸರಿಸಬೇಕು. ಆಗ ಮತ್ತೊಂದನ್ನು ಬಿಡುವುದು. ಅಲ್ಲದೆ ಬೇರೆ ಮಾರ್ಗವಿಲ್ಲ ಎಂದನು, ಆ ಶಕುನಿ. ಇಹಸುಖ-ಪಾಂಡವರನ್ನು ಮೋಸದಿಂದ ಇಲ್ಲವಾಗಿಸಿದರೆ ಇಹಲೋಕದಲ್ಲಿ ರಾಜನಾಗಿ ಸುಖ ಪಡಬಹುದು. ಪರಲೋಕದ ಸುಖ: ಅದು- ಪಾಂಡವರನ್ನು ಹತ್ಯೆಮಾಡಿದರೆ, ಅಧರ್ಮವಾದರೆ ಪರಲೋಕದಲ್ಲಿ ಸ್ವರ್ಗವಿಲ್ಲ. ಅದಲ್ಲದೆ ದಯೆ,ಧರ್ಮದಿಂದ ನೆಡೆದು ಸತ್ತನಂತರ ಸ್ವರ್ಗಪಡೆಯುವ ಆಸೆ ಇದ್ದರೆ, ಪಾಂಡವರನ್ನು ಬದುಕಲು ಬಿಟ್ಟು, ಪಾಂಡವರೊಡನೆ ರಾಜ್ಯ ಹಂಚಿಕೊಂಡರೆ ಅವರು ಪ್ರಬಲರಾಗಿ ಅವರ ಏಳಿಗೆಯನ್ನು ನೋಡುತ್ತಾ ದುಃಖಪಡಬೇಕಾಗುವುದು.