Karnata Bharata Kathamanjari 1.9.61_71
Karṇāṭa Bhārata Kathāmañjarī 1.9.61_71
- Language
- Kannada
1.9.61_71
ಎಲೆಮಗನೆ ಎನ್ನಾಣೆ, ಹೊಗಬೇಡ! ಬಾ ಕುರುಕುಲತಿಲಕ ನೀ ಹೋಗಲು+ ಎನ್ನೊಡಲು+ ಉಳಿವುದೇ= ನೀನು ನನ್ನನು ಬಿಟ್ಟು ಹೋದರೆ ನನ್ನ ಈ ದೇಹ ಉಳಿಯುವುದೇ? ನಾನು ಬದುಕಿರುವುದಿಲ್ಲ, ಮರಿಯಾನೆ (ಮರಿಯಾನೆಯಂತಿರುವ ಮುದ್ದು ಮಗನೇ), ಬಾರೈ ಕಂದ ಬಾಯೆಂದು, ಸೆಳೆದು ಬಿಗಿಯಪ್ಪಿದನು= ಮಗನನ್ನು ಎಳೆದುಕೊಂಡು ಬಿಗಿಯಾಗಿ ಅಪ್ಪಿಕೊಂಡು ಸಮಾಧಾನ ಪಡಿಸಿದನು. ಕಂಬನಿದುಳುಕಿದನು= ದುರ್ಯೋಧನನು ಬಿಟ್ಟು ಹೋಗುವೆನೆಂದುಕ್ಕೆ ದೃತರಾಷ್ಟ್ರನ ಕಣ್ಣಲ್ಲಿ ನೀರು ತುಂಬಿತು, ಹೇಳಿನ್ನು ಮೇಲಣ ಬಳಕೆಯನು= ಹೇಳು ಇನ್ನ ಮುಂದೆ ಬಳಸುವ ಉಪಾಯವನ್ನು, ರಿಪುರಾಜ ಕಾರ್ಯಕೆ= ಶತ್ರುರಾಜರ ನಿವಾರಣೆಯ ಕಾರ್ಯಕ್ಕೆ, ಬುದ್ಧಿಯೇನೆಂದ= ನೀನು ಮಾಡಿದ ಬುದ್ಧಿವಂತಿಕೆಯ ಉಪಾಯವು ಏನು ಎಂದ.