Karnata Bharata Kathamanjari 1.25.14
Karṇāṭa Bhārata Kathāmañjarī 1.25.14
- Language
- Kannada
1.25.14
ಮುರಿಯದ೦ತಿರೆ ಲಘುವಿನಲಿ ಹೆ
ಮ್ಮರವನೊಯ್ಯನೆ ನೆಮ್ಮಿ ಕುಳ್ಳಿ
ರ್ದರಿ ದಿಶಾಪಟ ನುಡಿಸಿದನು ಪವಮಾನನ೦ದನನ |
ಭರವಿದೆಲ್ಲಿಗೆ ಮರ್ತ್ಯನೋ ಖೇ
ಚರನೋದೈತ್ಯನೋ ದಿವಿಜನೋ ಕಿ
ನ್ನರನೋ ನೀನಾರೆ೦ದು ಭೀಮನ ನುಡಿಸಿದನು ಹನುಮ || ೧೪ ||