Pramāṇa · Search · About · API

Karnata Bharata Kathamanjari 1.37.24_29

Karṇāṭa Bhārata Kathāmañjarī 1.37.24_29

Language
Kannada

1.37.24_29

ಅರ್ಜುನನು, ಆಳೊಳು+ ಒಡ್ಡುಳ್ಳವನು ಭಾರಿಯ ತೋಳುಗಳ ಹೊತ್ತವನು= ಜನರಲ್ಲಿ ಗೌರವವುಳ್ಳ ಯುವರಾಜನಾದ ನೀನು,ಬಲಿಷ್ಠ ತೋಳುಗಳನ್ನು ಹೊಂದಿ/ ಮನೆಯಲಿ ಸೂಳೆಯರ ಮುಂದೆ+ ಒದರಿ ಭಾಷ್ಕಳ+ಗ+ ಕೆಡೆದು ಬಂದು+= ಅರಮನೆಯಲ್ಲಿ ರಾಣೀವಾಸದ ದಾಸಿವನಿತೆಯರ ಮುಂದೆ ದೊಡ್ದದಾಗಿ ಘರ್ಜಿಸಿ ಶೌರ್ಯದ ಭಾಷೆಗಳನ್ನು ಕೆಡೆದು- ನಾಲಿಗೆಯಿಂದ ಉದುರಿಸಿ, ಯುದ್ಧಮಾಡದೆ, ಅದರಲ್ಲಿ ವೀರರಂತೆ ಗಾಯಪಡದೆ,/ ಕಾಲುವೇಗವ ತೋರಿದೊಡೆ= ಕಾಲಿಗೆ ವೇಗವನ್ನು ತೋರಿಸಿ ಯುದ್ಧದಿಂದ ಓಡಿಹೋದರೆ// ನಿನ್ನ+ ಓಲಗದೊಳು+ ಎಂತು+ ಅಕಟ ನಾಚದೆ ಕುಳ್ಳಿತಿಹೆ+ಯ+ ಎಂದ= ನಿನ್ನ ಆ ವನಿತೆಯರ ಸಭೆಯಲ್ಲಿ, ದೇವರೇ, ಅಕ್ಕಟಾ, ನಾಚಿಕೆ ಪಡದೆ ಹೇಗೆ ಕುಳಿತುಕೊಳ್ಳುವೆ, ಎಂದ.