Karnata Bharata Kathamanjari 1.37.24_30
Karṇāṭa Bhārata Kathāmañjarī 1.37.24_30
- Language
- Kannada
1.37.24_30
ಕೆತ್ತುಕೊಂಡಾ ನಾಚಿಕೆಗೆ ನೆರೆ
ಕುತ್ತಿಕೊಳಬೇಕೆಂಬ ಗಾದೆಯ
ನಿತ್ತ ಹೊದ್ದಿಸಬೇಡ ನಾವಂಜುವೆವು ಕಾಳಗಕೆ
ತೆತ್ತಿಗನು ನೀನಹಿತನಂತಿರೆ
ಮಿತ್ತುವಹರೇ ನಿನಗೆ ಬೇಡಿದ
ನಿತ್ತು ಸಲಹುವೆನೆನ್ನ ಕೊಲ್ಲದೆ ಬಿಟ್ಟು ಕಳುಹೆಂದ ೨೫
ಕೆತ್ತುಕೊಂಡ (ಎತ್ತಿಹಿಡಿದ- ಹೆಚ್ಚಾಗು- ಕೆತ್ತಿದ ಶಾಸನ- ಅಂಟಿದ.)+ ಆ ನಾಚಿಕೆಗೆ ನೆರೆ ಕುತ್ತಿಕೊಳಬೇಕು+ ಎಂಬ ಗಾದೆಯನು+ ಇತ್ತ ಹೊದ್ದಿಸಬೇಡ= 'ಮನಸ್ಸಿಗೆ ಹತ್ತಿದ ಹೆಚ್ಚಾದ ಆ ನಾಚಿಕೆಗೆ ಕುತ್ತಿಗೆ ಕೊಡಬೇಕು'; 'ಹತ್ತಿದ ನಾಚಿಕೆಗೆ ಕುತ್ತಿಗೆ ಕೊಡಬೇಕು' ಎಂಬ ಗಾದೆಯನು+ ಇತ್ತ ಹೊದ್ದಿಸಬೇಡ- ಇಲ್ಲಿ ಹೊಂದಿಸಿ ತರಬೇಡ.// ನಾವು+ ಅಂಜುವೆವು ಕಾಳಗಕೆ, (ತೆತ್ತಿಗ= ಬಂಧು.ಸೇವಕ.ಹೊಣೆಗಾರ.) ತೆತ್ತಿಗನು ನೀನು+ ಅಹಿತನಂತೆ+ ಇರೆ ಮಿತ್ತುವು+ ಅಹರೇ= ಸೇವಕನಾಗಿದ್ದು ವಿರೋಧಿಯಂತೆ ಇದ್ದು, ಮಿತ್ತು- ಮೃತ್ಯುವಿನಂತೆ ಆಗುವರೇ- ವರ್ತಿಸಬಹುದೇ?, ನಿನಗೆ ಬೇಡಿದನು+ ಇತ್ತು ಸಲಹುವೆನು+ ಎನ್ನ ಕೊಲ್ಲದೆ ಬಿಟ್ಟು ಕಳುಹು+= ನಿನಗೆ ಕೇಳಿದ್ದನ್ನು ಕೊಟ್ಟು ಸಾಕುತ್ತೇನೆ, ನನ್ನನ್ನು ಬಿಟ್ಟು ಕಳುಹಿಸು' ಎಂದ ಉತ್ತರ.